Pimples- How to control Naturally Using home Remedies || ಮುಖದ ಮೇಲೆ ಬರುವ ಮೊಡವೆಗಳನ್ನು ಕಂಟ್ರೋಲ್ ಮಾಡುವ ಮನೆಮದ್ದುಗಳು.

Spread the love

ನಾವು ತಿಳಿಯಬೇಕಿರುವ ವಿಷಯ ಏನೆಂದರೆ, ಪಿಂಪಲ್ಸ್ ಅಂದರೆ ಏನು, ಅದು ಯಾಕೆ ಬರುತ್ತೆ, Pimples ಮತ್ತು Acne ನಡುವೆ ಇರುವ ವ್ಯತ್ಯಾಸ , ಇದು ಯಾವ ವಯಸ್ಸಿನವರಿಗೆ ಬರುತ್ತೆ, ಲಕ್ಷಣಗಳು, ಕಾರಣಗಳು, ಮತ್ತೆ ಇದನ್ನು ಗುಣಪಡಿಸಲು ಇರುವ ನೈಸರ್ಗಿಕ ಮನೆಮದ್ದುಗಳು.

Pimples

ಮೊಡವೆ Pimples, ಇದು ಸಾಮಾನ್ಯವಾಗಿ ಒಬ್ಬ ಹುಡುಗ ಅಥವಾ ಹುಡುಗಿ ಯವ್ವನದ ವಯಸ್ಸಿಗೆ ಬಂದಾಗ ದೇಹದಲ್ಲಿನ ಹಾರ್ಮೋನ್ ಬದಲಾಗುವುದರಿಂದ ಮುಖದ ಮೇಲೆ ಸಣ್ಣ ಸಣ್ಣ ಗುಳ್ಳೆಗಳ ರೀತಿ ಕೆಂಪು ಮಚ್ಚೆಗಳ ರೀತಿ ಕಂಡು ಬರುತ್ತವೆ. ಕೆಲವರಲ್ಲಿ ದೇಹದ ಆರೋಗ್ಯ ಸರಿ ಇಲ್ಲದಿದ್ದರೂ ಮುಖದ ಮೇಲೆ ಈ ರೀತಿ ಪಿಂಪಲ್ಸ್ ಬರುತ್ತವೆ.
ಕೆಲವರಿಗೆ ಇವು ಕಡಿಮೆ ಪ್ರಮಾಣದಲ್ಲಿ ಬರುತ್ತವೆ, ನಂತರ ಹೊರತು ಹೋಗುತ್ತವೆ, ಆದರೆ ಕೆಲವೊಬ್ಬರಲ್ಲಿ ಈ ಪಿಂಪಲ್ಸ್ ಬಂದರೆ ಏನೇ ಮಾಡಿದರೂ ಹೋಗುವುದಿಲ್ಲ.
ಇದಕ್ಕೆ ತುಂಬಾ ಜನ ಏನು ಮಾಡುತ್ತಾರೆಂದರೆ, ಮೆಡಿಕಲ್ ಸ್ಟೋರ್ ಗೆ ಹೋಗಿ ಯಾವುದೂ ಒಂದು ಕ್ರೀಮ್ ತಂದು ಹಚ್ಚಲು ಶುರು ಮಾಡುತ್ತಾರೆ. ಆದರೆ ಅದರಿಂದ ಪಿಂಪಲ್ಸ್ ಹೋಗುತ್ತಾ ಅಂದರೆ ಇಲ್ಲ. ಆ ರೀತಿ ಕೆಮಿಕಲ್ ಕ್ರೀಮ್ ಬಳಸುವುದರಿಂದ ಇನ್ನು ಮುಖದ ಚರ್ಮ ಹಾಳಾಗುತ್ತದೆ. ಅದಕ್ಕೆಂದೇ ನಾನು ಈ ಬ್ಲಾಗ್ ನಲ್ಲಿ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿ ಮುಖದ ಮೇಲಿನ ಪಿಂಪಲ್ಸ್ ಅನ್ನು ದೂರ ಮಾಡಬಹುದೆಂದು ತಿಳಿಸಿದ್ದೇನೆ.

ಪಿಂಪಲ್ಸ್ ಅಂದರೆ ಮುಖದ ಚರ್ಮದ ಮೇಲೆ ಸಣ್ಣ ಸಣ್ಣದಾಗಿ ಬರುವ ಗುಳ್ಳೆಗಳು. ಇವು ಕೆಲವರಿಗೆ ಕೆಂಪು ಬಣ್ಣದಲ್ಲಿದ್ದರೆ ಇನ್ನು ಕೆಲವರಿಗೆ ಕಪ್ಪು ಬಣ್ಣದಲ್ಲಿರುತ್ತವೆ. ಒಬ್ಬ ವೆಕ್ತಿ ವಯಸ್ಸಿಗೆ ಬಂದಾಗ ಅವರಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದ ಮುಖದ ಚರ್ಮದಲ್ಲಿ “Sebum” ಎನ್ನುವ ಆಯಿಲ್ ಉತ್ಪಾದನೆ ಮಾಡುವ ಗ್ಲ್ಯಾಂಡ್ಸ್ ಬರುತ್ತವೆ . ಇವು ಎಣ್ಣೆ ಅಂಶ ಜಾಸ್ತಿ ಉತ್ಪಾದಿಸಿದಾಗ ಮುಖದ ಮೇಲೆ ಇರುವ ದೂಳಿನ ಅಂಶ ಮತ್ತೆ ಇದು ಸಣ್ಣ ಸಣ್ಣ ತೂತುಗಳಲ್ಲಿ ಸೇರಿ ಅಲ್ಲೇ ಉಳಿದುಕೊಂಡು ಬ್ಯಾಕ್ಟೀರಿಯಾ ಉತ್ಪಾದನೆ ಆಗಿ ಅಲ್ಲಿ ಮೊಡವೆಗಳು ಬರುತ್ತದೆ.

ಸಾಮಾನ್ಯವಾಗಿ ಪಿಂಪಲ್ಸ್ ಮುಖದ ಮೇಲೆ, ನೆತ್ತಿಯ ಮೇಲೆ, ಮೂಗಿನ ಮೇಲೆ ಗಲ್ಲದ ಮೇಲೆ ಬರುತ್ತವೆ. ಕೆಲವರಿಗೆ ಕಿವಿಯ ಮೇಲೆ ಮತ್ತೆ ಹಿಂಬಾಗದಲ್ಲಿ ಕಾಣಿಸುತ್ತವೆ.
ಇವು ಕೆಲವರಲ್ಲಿ ನೋವು ಉಂಟುಮಾಡುವುದಿಲ್ಲ ಆದರೆ ಕೆಲವರಿಗೆ ತುಂಬಾ ನೋವು ಕೊಡುತ್ತವೆ.
ಪಿಂಪಲ್ಸ್ ಅನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಜಾಸ್ತಿಯಾಗುತ್ತವೆ. ಮತ್ತೆ ಅವು ಹೋದ ಮೇಲೆ ಕಪ್ಪು ಮಚ್ಚೆಗಳು Dark Spot ಹಾಗೆ ಉಳಿಯುತ್ತವೆ, ಇಲ್ಲವಾದರೆ ಪಿಂಪಲ್ಸ್ ಇದ್ದ ಜಾಗದಲ್ಲಿ ತೂತುಗಳು Open pores ಹಾಗೆ ಉಳಿಯುತ್ತವೆ.

PIMPLES ಬರುವ ಪ್ರಮುಖ ಹಂತಗಳು:

  •  ಮುಖದಲ್ಲಿ ಹೆಚ್ಚಿನ ಎಣ್ಣೆ ಉತ್ಪಾದನೆ ಆದಾಗ.
  •  ಮುಖದ ಮೇಲಿನ ಚರ್ಮದ ರಂದ್ರಗಳು ಮುಚ್ಚಿಕೊಂಡಾಗ
  •  ಚರ್ಮದಲ್ಲಿ ಬ್ಯಾಕ್ಟೀರಿಯಾ ಹೆಚ್ಚು ಬೆಳವಣಿಗೆ ಆದಾಗ.

ಪಿಂಪಲ್ಸ್ ಬರುವುದು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಅಂದರೆ ಒಬ್ಬರಿಗೆ ಮುಖವೆಲ್ಲಾ ಹರಡಿದರೆ ಇನ್ನು ಕೆಲವರಿಗೆ ಅಲ್ಲಲ್ಲಿ ಬಾನು ಹೋಗುತ್ತವೆ.
ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿ, ದೇಹದ ಹಾರ್ಮೋನ್ ಮಟ್ಟ, ನಾವು ತಿನ್ನುವ ಆಹಾರ.

PIMPLES ಮತ್ತು Acne ಇವೆರಡರ ನಡುವಿನ ಸಣ್ಣ ವ್ಯತ್ಯಾಸ

ತುಂಬಾ ಜನ pimples and acne ಎರಡೂ ಒಂದೇ ಎಂದುಕೊಳ್ಳುತ್ತಾರೆ. ಆದರೆ ಇವೆರಡರ ನಡುವೆ ಸಣ್ಣ ಸಣ್ಣ ವ್ಯತ್ಯಾಸಗಳಿವೆ.

  •  ಪಿಂಪಲ್ಸ್ ಇವು ಚರ್ಮದ ಮೇಲೆ ಸಣ್ಣ ಗುಳ್ಳೆಗಳ ರೀತಿ ಬರುತ್ತವೆ. ಆದರೆ acne ಇದು ಚರ್ಮಕ್ಕೆ ಬರುವ ಒಂದು ಕಾಯಿಲೆ.
  •  ಪಿಂಪಲ್ಸ್ ಬಂದರೆ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ.
    ಆದರೆ acne ಇದು ತುಂಬಾ ವರ್ಷಗಳ ಕಾಲ ಮುಂದುವರಿಯುತ್ತದೆ.
  •  ಪಿಂಪಲ್ಸ್ ಇದು ನಮ್ಮ ಮುಖದ ಮೇಲಿನ ದೂಳು, ಎಣ್ಣೆಯಂಶ ಇದರಿಂದ ಬಂದರೆ acne ಇದು ಮುಖದ ಚರ್ಮದ ಬ್ಯಾಕ್ಟೀರಿಯಾ, ಮತ್ತೆ ಹಾರ್ಮೋನ್ ಬದಲಾವಣೆಯಿಂದ ಬರುತ್ತದೆ.
  •  ಪಿಂಪಲ್ಸ್ ಗೆ ಮನೆ ಮದ್ದು ಬಳಸಿದರೆ ದೂರ ಮಾಡಬಹುದು ಆದರೆ, acne ಇದು ಕೆಲವೊಮ್ಮೆ ಅಲೋಪತಿ ಸ್ಕಿನ್ ಡಾಕ್ಟರ್ ಬಳಿಯೇ ತೋರಿಸಬೇಕಾಗುತ್ತದೆ.

ಇನ್ನು ಅರ್ಥವಾಗುವ ರೀತಿ ಹೇಳಬೇಕಾದರೆ, ಎಲ್ಲಾ Acneಗಳಲ್ಲಿ ಪಿಂಪಲ್ಸ್ ಇರಬಹುದು. ಆದರೆ ಎಲ್ಲಾ ಪಿಂಪಲ್ಸ್ ಗಳು Acne ಆಗುವುದಿಲ್ಲ.

ಯಾವ ವಯಸ್ಸಿನಲ್ಲಿ PIMPLES ಬರುತ್ತವೆ?

  • ಸಾಮಾನ್ಯವಾಗಿ 15 ರಿಂದ 25 ವರ್ಷದ ವಯಸ್ಸಿನಲ್ಲಿ ವ್ಯಕ್ತಿಯ ದೇಹದ ಹಾರ್ಮೋನ್ ಗಳು ತುಂಬಾ ಬೇಗ ಬದಲಾಗುವುದರಿಂದ ಈ ಸಮಯದಲ್ಲಿ ಪಿಂಪಲ್ಸ್ ಬರುತ್ತವೆ.
  •  ಅದರಲ್ಲಿ ಕೆಲವರಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ತನ್ನ ಪೆರಿಯಡ್ಸ್ ಸ್ಟಾರ್ಟ್ ಆಗುವ ಸಮಯದಲ್ಲಿ ಪಿಂಪಲ್ಸ್ ಬರುತ್ತವೆ.
  •  ಇನ್ನೂ ಕೆಲವರಿಗೆ ಕಾಲೇಜು ವಯಸ್ಸಿನಲ್ಲಿ ಬರುತ್ತವೆ.
  •  ಕೆಲವರಲ್ಲಿ30 ವರ್ಷದ ನಂತರವೂ ಪಿಂಪಲ್ಸ್ ಬರುತ್ತವೆ.

ಇತ್ತೀಚಿನ ದಿನದಲ್ಲಿ ನಾವು ತಿನ್ನುವ ಆಹಾರ, ನಮ್ಮ ಜೀವನಶೈಲಿಯಿಂದ ವಯಸ್ಸಾದವರಲ್ಲಿಯೂ ಅನೇಕ ಚರ್ಮದ ಸಮಸ್ಯೆಯಿಂದ ಪಿಂಪಲ್ಸ್ ಬರುತ್ತವೆ.

ಮುಖದಲ್ಲಿ PIMPLES ಬರುವ ಲಕ್ಷಣಗಳು

ನಮ್ಮ ಮುಖದಲ್ಲಿ ಪಿಂಪಲ್ಸ್ ಬರುವುದಕ್ಕೆ ಮುಂಚೆ ಕೆಲವೊಂದು ಲಕ್ಷಣಗಳು ಕಾಣಿಸುತ್ತವೆ ಅವೇನೆಂದರೆ;

  •  ಸಣ್ಣ ಸಣ್ಣದಾಗಿ ಕೆಂಪು ಗುಳ್ಳೆಗಳು ಬರುತ್ತವೆ.
  •  ಮುಖದ ಚರ್ಮದಲ್ಲಿ ಎಣ್ಣೆ ಜಾಸ್ತಿಯಾಗುತ್ತದೆ oiliness.
  •  ಚರ್ಮ ಒಂದು ರೀತಿ ಒರಟಾಗುತ್ತದೆ.
  •  ಮುಖವನ್ನು ಮುಟ್ಟುವಾಗ ಒಂತರ ನೋವು.
  •  ಚರ್ಮ ಸ್ವಲ್ಪ ಉರಿ ಬರುವುದು.
  • ಪಿಂಪಲ್ಸ್ ಒಳಗೆ ಪುಸ್ ತರ ಬಿಳಿಯದಾಗಿ ಬರುವುದು.

ಕೆಲವರಿಗಂತೂ ಈ ರೀತಿ ಇರುವುದರಿಂದ ಅವರ ಆತ್ಮ ವಿಶ್ವಾಸ ತುಂಬಾ ಕಡಿಮೆಯಾಗುತ್ತದೆ.
ಪಬ್ಲಿಕ್ ಪ್ಲೇಸ್ ಅಲ್ಲಿ ಮತ್ತೆ ಫ್ರೆಂಡ್ಸ್ ಗೆ ಮುಖ ತೂರಿಸುವುದಕ್ಕೆ ಬೇಜಾರಾಗುತ್ತದೆ.

Pimples

PIMPLES ಬರಲು ಪ್ರಮುಖ ಕಾರಣಗಳು

1. ಹಾರ್ಮೋನ್ ಬದಲಾವಣೆ :
ಯವ್ವನದ ವಯಸ್ಸಿನಲ್ಲಿ ದೇಹದಲ್ಲಿ ಹಾರ್ಮೋನ್ ಗಳು ತುಂಬಾ ಬೇಗವಾಗಿ ಬದಲಾಗುತ್ತವೆ. ಆಗ ಮುಖದಲ್ಲಿನ ತೈಲ ಗ್ರಂಥಿಗಳು ಹೆಚ್ಚು ಎಣ್ಣೆಯನ್ನು ಉತ್ಪಾದಿಸುತ್ತವೆ. ಇದು ಮುಖದಲ್ಲಿ ಪಿಂಪಲ್ಸ್ ಬರಲು ಪ್ರಮುಖ ಕಾರಣವಾಗುತ್ತದೆ.

2. ಎಣ್ಣೆಯ ಆಹಾರ :
ನಾವು ಮುಂಚೆ ಮನೆಯಲ್ಲಿಯೇ ಊಟ ಮಾಡುತ್ತಿದ್ದರಿಂದ ಅಷ್ಟೇನೂ ಮೊಡವೆಗಳು ಬರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒರಗಡೆ ಸಿಗುವ ಪಾಸ್ಟ್ ಫುಡ್, ಪ್ರೈಡ್ ಫುಡ್, ಇತ್ಯಾದಿ ಇದನ್ನು ತಿನ್ನುವುದರಿಂದ ಮುಖದಲ್ಲಿ ಎಣ್ಣೆಯಂಶ ಜಾಸ್ತಿಯಾಗಿ ಪಿಂಪಲ್ಸ್ ಬರುತ್ತವೆ.

3. ಒತ್ತಡ (Stress) :
ಕೆಲವು ವರದಿಗಳ ಪ್ರಕಾರ ನಾವು ಮಾನಸಿಕವಾಗಿ ಒತ್ತಡದಲ್ಲಿದ್ದಾಗ ಸಹ ಪಿಂಪಲ್ಸ್ ಜಾಸ್ತಿಯಾಗುತ್ತವೆ.

4. ಸರಿಯಾದ ಮುಖ ಸ್ವಚ್ಛತೆ ಇಲ್ಲದಿರುವುದು :
ನಮ್ಮ ಮುಖದ ಸ್ವಚ್ಛತೆ ಇಲ್ಲದಿದ್ದರೆ, ದೂಳು ಮತ್ತು ಬೆವರು ಮುಖದಲ್ಲೇ ಉಳಿದು ಮುಖದ ರಂದ್ರಗಳು ಮುಚ್ಚಿಕೊಂಡು ಪಿಂಪಲ್ಸ್ ಜಾಸ್ತಿಯಾಗುತ್ತವೆ.

5. ಕಡಿಮೆ ನೀರು ಕುಡಿಯುವುದು :
ದೇಹ ಯಾವಾಗಲೂ ಹೈಡ್ರೇಟ್ ಆಗಿರಬೇಕು. ದೇಹದಲ್ಲಿ ನೀರಿನ ಕೊರತೆ ಬಂದಾಗ ಚರ್ಮದ ಆರೋಗ್ಯ ಹಾಳಾಗುತ್ತದೆ.

6. ಹೆಚ್ಚು ಮೆಕಪ್ ಬಳಕೆ :
ಕೆಲವರು ಯಾವುದೇ ಪಂಕ್ಷನ್ ಇಲ್ಲದಿದ್ದರೂ ಪ್ರತೀ ಬಾರಿ ಕೆಲವು ಕಾಸ್ಮೆಟಿಕ್ ಮೇಕಪ್ ಗಳನ್ನು ಬಳಸುವುದರಿಂದ ಮುಖದ ಚರ್ಮ ಹಾಳಾಗಿ ಪಿಂಪಲ್ಸ್ ಜಾಸ್ತಿಯಾಗುತ್ತವೆ.

7. ನಿದ್ರೆಯ ಕೊರತೆ :
ನಾವು ಸರಿಯಾಗಿ ನಿದ್ದೆ ಮಾಡಿಲ್ಲ ಎಂದಾದರೆ ನಮ್ಮ ಚರ್ಮದ ಆರೋಗ್ಯ ಹಾಳಾಗಿ ಪಿಂಪಲ್ಸ್ ಜಾಸ್ತಿಯಾಗುತ್ತವೆ.

Pimples ಕಡಿಮೆ ಮಾಡಲು ನೈಸರ್ಗಿಕ ಮನೆಮದ್ದುಗಳು

1. ಅಲೋವೆರಾ ಜೆಲ್ :
ನೈಸರ್ಗಿಕವಾಗಿ ನಮ್ಮಲ್ಲೇ ಸಿಗುವ ಈ ಆಲೋವೆರಾವನ್ನು ತಂದು ಅದರಿಂದ ಜೆಲ್ ತೆಗೆದು ದಿನಕ್ಕೊಂದು ಸಾರಿ ಮಲಗುವ ಮುನ್ನ ಮತ್ತೆ ಬೆಳಿಗ್ಗೆ ಎದ್ದ ನಂತರ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಇದು ಚರ್ಮದ ಆಳಕ್ಕೆ ಹೋಗಿ ಪಿಂಪಲ್ಸ್ ಬರುವುದನ್ನು ತಡೆಯುತ್ತದೆ. ರಾತ್ರಿ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ.
ಈ ರೀತಿ ಕನಿಷ್ಠ ಒಂದು ತಿಂಗಳು ಬಿಡದೇ ಮಾಡಿ, ನಂತರ ರಿಸಲ್ಟ್ ನೋಡಿ.

Aloe vera gel for Pimples

2. ಅರಿಶಿನ ಮತ್ತು ಜೇನುತುಪ್ಪ :
ಅರಿಶಿನದಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣಗಳಿರುವುದರಿಂದ ಇದು ಮುಖದ ಚರ್ಮದ ಬ್ಯಾಕ್ಟೀರಿಯಾವನ್ನು ನಿಧಾನವಾಗಿ ನಾಶಮಾಡಿ, ಚರ್ಮದ ಪಿಂಪಲ್ಸ್ ಅನ್ನು ಬಾರದಂತೆ ತಡೆಯುತ್ತದೆ.
ಹರಿಶಿಣ ಮತ್ತೆ ಒಂದು ಚಮಚ ಜೇನುತುಪ್ಪ ಇದರಲ್ಲಿ antibacterial and anti-inflammatory ಅಂಶವಿರುವುದರಿಂದ ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ರೀತಿ ಪಿಂಪಲ್ಸ್ ಮೇಲೆ ಹಚ್ಚಿ ನಂತರ 30 ನಿಮಿಷ ಬಿಟ್ಟು ತಣ್ಣೇರಿನಲ್ಲಿ ತೊಳೆಯಿರಿ

3. ಬೇವಿನ ಎಲೆಯ ಪೇಸ್ಟ್ :
ಬೇವಿನ ಎಳೆಯಲ್ಲಿ ಆಂಟಿ ಫಂಗಲ್ ಆಂಟಿ ಬ್ಯಾಕ್ಟಿರಿಯಲ್ ಅಂಶ ಜಾಸ್ತಿ ಇರುವುದರಿಂದ ಚರ್ಮದ ಸೋಂಕಿಗೆ ರಾಮಬಾಣದ ರೀತಿ ಕೆಲಸ ಮಾಡುತ್ತದೆ.
ಬೇವಿನ ಎಲೆಗಳನ್ನು ನೀರು ಮಿಕ್ಸ್ ಮಾಡಿ ರುಬ್ಬಿ ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ. ಈ ರೀತಿ ಕನಿಷ 20 ದಿನ ಮಾಡಿದರೆ ಪಿಂಪಲ್ಸ್ ಹೊರತು ಹೋಗುತ್ತವೆ.


4. ನಿಂಬೆ ರಸ :
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಜಾಸ್ತಿ ಇರುವುದರಿಂದ ಇದು ಪಿಂಪಲ್ಸ್ ಅನ್ನು ಬೇಗ ಗುಣ ಮಾಡುತ್ತದೆ. ಆದರೆ ಪಿಂಪಲ್ಸ್ ಮೇಲೆ ನೇರವಾಗಿ ಇದನ್ನು ಮುಖಕ್ಕೆ ಹಚ್ಚುವುದರಿಂದ ಜಾಸ್ತಿ ಉರಿಯುತ್ತದೆ. ಆದ್ದರಿಂದ ಸ್ವಲ್ಪ ನೀರಿನಲ್ಲಿ ಮಿಕ್ಸ್ ಮಾಡಿ ಹಚ್ಚಬೇಕು.
ದಿನಕ್ಕೆ ಎರಡು ಬಾರಿ ಈ ರೀತಿ ಹಚ್ಚಿ ನಿಮ್ಮ ಮುಖ ಕಾಂತಿಯುತವಾಗುತ್ತದೆ ಮತ್ತೆ ಪಿಂಪಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ.

5. ಐಸ್ ಕ್ಯೂಬ್ ಬಳಕೆ :
ಐಸ್ ಕ್ಯೂಬ್ ಬಳಸುವುದರಿಂದ ಈಗಾಗಲೇ ಜಾಸ್ತಿ ನೋವು ಕೊಡುತ್ತಿರುವ ಪಿಂಪಲ್ಸ್ ಸ್ವಲ್ಪ ಆರಾಮವಾಗಬಹುದು. ಮತ್ತೆ ಚರ್ಮ ಉರಿಯುತ್ತಿರುವುದು ಕಡಿಮೆಯಾಗುತ್ತದೆ.
ಐಸ್ ಕ್ಯೂಬ್ ಗಳನ್ನೂ ಒಂದು ಬಟ್ಟೆಯಲ್ಲಿ ಸುತ್ತಿ ಪಿಂಪಲ್ಸ್ ಮೇಲೆ ಇಟ್ಟು 10 ನಿಮಿಷ ಬಿಡಿ ಈ ರೀತಿ ದಿನಕ್ಕೆ 2-3 ಸಾರಿ ಮಾಡಿ ಪಿಂಪಲ್ಸ್ ಸ್ವಲ್ಪ ಕಡಿಮೆಯಾಗುತ್ತವೆ.

6. ಟೀ ಟ್ರೀ ಆಯಿಲ್ :
ಇದರಲ್ಲಿ ಬ್ಯಾಕ್ಟಿರಿಯಾ ವಿರೋಧಿ ಗುಣಗಳಿರುವುದರಿಂದ ಪ್ರತಿದಿನ 2-4 ಹನಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಪಿಂಪಲ್ಸ್ ಮೇಲೆ ಹಚ್ಚಿ ಮಸಾಜ್ ಮಾಡಿದರೆ, ಮುಖದ ಉರಿ ಮತ್ತೆ ಊತವನ್ನು ಕಡಿಮೆ ಮಾಡುತ್ತವೆ.

Tea tree Oil for Pimples

7.ಹಸಿರು ತರಕಾರಿ ಮತ್ತು ಹಣ್ಣುಗಳು :
ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಸರಿಯಾದ ರೀತಿಯ ಹಸಿರು ತರಕಾರಿಗಳು ಮತ್ತೆ ಹಣ್ಣುಗಳು ಹಾಗೂ ಸೊಪ್ಪುಗಳನ್ನು ತಿನ್ನಬೇಕು.
ಅದರಲ್ಲೂ ಮುಖ್ಯವಾಗಿ ನಮ್ಮ ಮುಖದ ಚರ್ಮದ ಆರೋಗ್ಯಕ್ಕಾಗಿ ವಿಟಮಿನ್ A C,ಮತ್ತು E ಇರುವ ಆಹಾರ ಪಧಾರ್ಥಗಳನ್ನು ತಿಂದರೆ ಪಿಂಪಲ್ಸ್ ಬರುವುದು ಕಡಿಮೆಯಾಗುತ್ತವೆ.

ಪ್ರಮುಖ ಆಹಾರಗಳು; ಕ್ಯಾರೇಟ್, ಬೀಟ್ರೋಟ್, ಕಿತ್ತಳೆ, ಪಾಲಕ್ ಸೊಪ್ಪುಸೌತೆಕಾಯಿ, ಎಳನೀರು.
ಅದರಲ್ಲೂ ಮುಖ್ಯವಾಗಿ,
ಬಸಳೆ ಸೊಪ್ಪು : ಇದರಲ್ಲಿರುವ ಪೋಷಕಾಂಶಗಳು ಮುಖದ ತೈಲ ಗ್ರಂಥಿಗಳಿಗೆ ಔಷಧಿಯಂತೆ ಇದ್ದು ಜಾಸ್ತಿ ಎಣ್ಣೆಯನ್ನು ಸ್ರವಿಸದಂತೆ ತಡೆಯುತ್ತದೆ.
ಇದು ಚರ್ಮದ ಜಿಡ್ಡುತನವನ್ನು ಕಡಿಮೆಮಾಡಿ ಮೊಡವೆ ಬರದಂತೆ ತಡೆಯುತ್ತದೆ, ಬಸಳೆ ಸೊಪ್ಪಿನಲ್ಲಿ ಹೆಚ್ಚಾಗಿ ಕ್ಲೋರೋಫಿಲ್ ಮತ್ತೆ ಕಬ್ಬಿಣಂಶ ಜಾಸ್ತಿ ಇದ್ದು ರಕ್ತವನ್ನು ಶುದ್ದೀಕರಣ ಮಾಡುತ್ತದೆ. ಈ ರೀತಿ ಮಾಡುವುದರಿಂದ ಶುದ್ಧ ರಕ್ತ ಮುಖದಲ್ಲಿ ಉತ್ಪತ್ತಿಯಾಗಿ ಮುಖದ ಪಿಂಪಲ್ಸ್ ಗೆ ನಾಂದಿ ಆಡುತ್ತದೆ.
ವೈಜ್ಞಾನಿಕವಾಗಿ ನಮ್ಮ ದೇಹದಲ್ಲಿ ಜಿಂಕ್ ಸತುವಿನ ಕೊರತೆಯಿಂದ ಪಿಂಪಲ್ಸ್ ಜಾಸ್ತಿಯಾಗುತ್ತವೆ, ಆದರೆ ಬಸಳೆ ಸೊಪ್ಪಿನಲ್ಲಿ ನೈಸರ್ಗಿಕವಾಗಿ ಸಿಗುವ ಜಿಂಕ್ ಅಂಶವು ಮುಖದ ಚರ್ಮದ ಮೈಕ್ರೋ ಬ್ಯಾಕ್ಟಿರೀಯಾವನ್ನು ನಾಶಮಾಡುವ ಗುಣ ಹೊಂದಿದೆ.

PIMPLES ಕಡಿಮೆ ಮಾಡಲು ತಿನ್ನಬಾರದ ಆಹಾರಗಳು

ಕೆಲವು ಆಹಾರಗಳನ್ನು ತಿಂದರೆ ಪಿಂಪ್ಲೆ ಜಾಸಿಯಾಗುತ್ತವೆ ಅವೆಂದರೆ;

  •  ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರ ಪಧಾರ್ಥಗಳು.
  •  ಪ್ರೋಸೆಸ್ಡ್ ಫುಡ್, ಪಾಸ್ಟ್ ಫುಡ್.
  •  ಕೋಲ್ಡ್ ಡ್ರಿಂಕ್ಸ್,
  •  ಹೆಚ್ಚು ಸಕ್ಕರೆ ಉಪಯೀಗಿಸಿದ ಫುಡ್.
    . ಜಿಡ್ಡಿನ ಆಹಾರ ಪಧಾರ್ಥಗಳು.

ಈ ರೀತಿಯ ಆಹಾರ ಪಧಾರ್ಥಗಳನ್ನು ತಿನ್ನುವುದರಿಂದ ನಮ್ಮ ಮುಖದ ಚರ್ಮ ಹಾಳಾಗಿ ಮೊಡವೆಗಳು ಜಾಸ್ತಿಯಾಗುತ್ತವೆ.

Leave a Comment

Your email address will not be published. Required fields are marked *

Scroll to Top