Table of Contents
Toggleಗರ್ಭಿಣಿ ಮಹಿಳೆಗೆ ಪೌಷ್ಠಿಕಾಂಶ ಆಹಾರ ಎಷ್ಟು ಮುಖ್ಯ? Nutrition During Pregnancy
Table of Contents
1. ಗರ್ಭಿಣಿ ಆಹಾರದಲ್ಲಿ ಸಮತೋಲನದ ಮಹತ್ವ ಯಾವ ರೀತಿ ಇರಬೇಕು?
2. ಗರ್ಭಿಣಿ ಮಹಿಳೆಯು ತಿನ್ನಲೇಬೇಕಾದ ಟಾಪ್ 10 ಪೌಷ್ಟಿಕಾಂಶ.
3. ಗರ್ಭಿಣಿಗೆ ಬೇಡವಾದ ಕೆಲವು ಆಹಾರಗಳು.
4. ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಿಣಿಯ ತೂಕ ನಿಯಂತ್ರಣ ಮಾಡುವುದು.
ಗರ್ಭವಾಸ್ಥೆಯ ಸಂದರ್ಭದಲ್ಲಿ ಒಬ್ಬ ತಾಯಿ ತನ್ನ ಆರೈಕೆಯ ಜೊತೆಗೆ ತನ್ನ ಮಗುವಿನ ಆರೈಕೆಗೆ ಹೆಚ್ಚು ಒತ್ತು ನೀಡುತ್ತಾಳೆ. ಆದ್ದರಿಂದ ಗರ್ಭಿಣಿ ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶಗಳು ಸಮತೋಲನವಾಗಿ ಇರಬೇಕು. ಸರಿಯಾದ ಆಹಾರ ಕ್ರಮವು ಮಗುವಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಜೊತೆಗೆ ಗರ್ಭಿಣಿಯ ಶಕ್ತಿಯನ್ನು ಜಾಸ್ತಿ ಮಾಡುತ್ತದೆ.
ಈ ಲೇಖನದಲ್ಲಿ ಗರ್ಭಿಣಿ ಮಹಿಳೆ ಯಾವ ಆಹಾರವನ್ನು ಸೇವಿಸಬೇಕು, ಯಾವ ಆಹಾರವನ್ನ ತಿರಸ್ಕರಿಸಬೇಕು, ಯಾವ ರೀತಿ ವ್ಯಾಯಾಮ ಮಾಡಬೇಕು, ತನ್ನ ದಿನನಿತ್ಯದ ಜೀವನಶೈಲಿ ಯಾವ ರೀತಿ ಇದ್ದರೆ ಗರ್ಭಿಣಿಯ ಸಾಮಾನ್ಯ ಸಮಸ್ಯೆಗಳಾದ ವಾಂತಿ(nausea) ಸುಸ್ತು(fatigue) ಮತ್ತು ಮಲಬದ್ಧತೆ(constipation)ಯನ್ನು ದೂರಮಾಡಬಹುದು ತಿಳಿಯೋಣ ಬನ್ನಿ.
ಗರ್ಭಿಣಿಯ ಆಹಾರದಲ್ಲಿ ಸಮತೋಲನದ(balanced diet) ಮಹತ್ವ ಯಾವ ರೀತಿ ಇರಬೇಕು?
ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಆಕೆ ಇಂದೆಂದೂ ಕಾಣದಂತಹ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಮಗು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗ ಅದಕ್ಕೆ ಪ್ರೊಟೀನ್, ಕಬ್ಬಿಣಾ೦ಶ , ಕ್ಯಾಲ್ಶಿಯಂ, ಮಿನರಲ್ಸ್, ವಿಟಮಿನ್,ಮತ್ತು ಪೋಲಿಕ್ ಆಸಿಡ್, ತುಂಬಾ ಮುಖ್ಯ.
ಈ ಸಮತೋಲನದ ಆಹಾರ ತಿನ್ನುವುದು ಗರ್ಭಿಣಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿ ಮುಖ್ಯವಾಗಿ :
- ಈ ಮೇಲಿನ ಅಂಶಗಳು ಮಗುವಿನ ದೇಹ ಮತ್ತು ಮೆದುಳಿನ ಬೆಳವಣಿಗೆಗೆ ತುಂಬಾ ಸಹಾಯಕವಾಗುತ್ತದೆ.
- ಗರ್ಭಿಣಿ ಮಹಿಳೆಯಲ್ಲಿ ರೋಗನಿರೋಧಕಶಕ್ತಿ ಜಾಸ್ತಿಯಾಗಿ ಯಾವುದೇ ಸಣ್ಣಪುಟ್ಟ ಕಾಯಿಲೆಯು ಬರದಂತೆ ತಡೆಯುತ್ತದೆ.
- ಗರ್ಭಾವಸ್ಥೆಯಲ್ಲಿ ಬರುವಂತಹ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.
- ತಾಯಿ ಮತ್ತು ಮಗುವಿನ ಆರೋಗ್ಯ ಅತ್ಯಂತ ಸುಂದರವಾಗಿರುತ್ತದೆ.
ಆದ್ದರಿಂದ ಗರ್ಭಿಣಿ ಮಹಿಳೆಯು ತಾನು ದಿನನಿತ್ಯ ತಿನ್ನುವ ಆಹಾರದಲ್ಲಿ, ಪೌಷ್ಟಿಕಾಂಶಗಳು ಸಮರ್ಪಕವಾಗಿ ಇರುವಂತೆ ಗಮನ ನೀಡಬೇಕು.
ಗರ್ಭಿಣಿ ಮಹಿಳೆಯು ತಿನ್ನಲೇಬೇಕಾದ ಟಾಪ್ 10 ಪೌಷ್ಟಿಕಾಂಶ ಆಹಾರಗಳು.
1. ಡೈರಿ ಉತ್ಪನ್ನಗಳು:
ಹೆಚ್ಚು ಕ್ಯಾಲ್ಶಿಯಂ ಅಂಶವನ್ನು ಹೊಂದಿರುವ ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್, ಇವು ಮಗುವಿನ ಮೂಳೆಗಳನ್ನು ಗಟ್ಟಿಗೊಳಿಸಲು, ಮಗುವಿನ ಹಲ್ಲುಗಳು ಗಟ್ಟಿಯಾಗಲು ಮತ್ತು ತಾಯಿಯ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದರಿಂದ ಪ್ರತಿದಿನ 2-3 ಬಾರಿ ಸೇವಿಸಬೇಕು.
2. ಹಸಿರು ಸೊಪ್ಪುಗಳು:
ನಾವು ಸಾಧ್ಯವಾದಷ್ಟೂ ಆರ್ಗ್ಯಾನಿಕ್( ತಿಪ್ಪೆ ಗೊಬ್ಬರ ಹಾಕಿ, chemical free) ರೀತಿಯಲ್ಲಿ ಬೆಳೆದ ಸೊಪ್ಪುಗಳನ್ನು ಸೇವಿಸಲು ಪ್ರೂತ್ಸಾಹಿಸಬೇಕು. ಅದರಲ್ಲಿ ಪ್ರಮುಖ ಸೊಪ್ಪುಗಳೆಂದರೆ, ಪಾಲಕ್ ಸೊಪ್ಪು (ಇದು ಗರ್ಭಿಣಿಗೆ ತುಂಬಾ ಒಳ್ಳೆಯ ಸೊಪ್ಪು), ಮೆಂತೆ, ಬಸಳೆ, ದಂಟು, ಈ ಎಲ್ಲ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಮತ್ತು ಮುಖ್ಯವಾಗಿ ಫೋಲಿಕ್ ಆಸಿಡ್ ಹೆಚ್ಚಾಗಿ ಇರುತ್ತದೆ( ಈಗ ಫೋಲಿಕ್ ಆಸಿಡ್ ಮಾತ್ರೆಗಳನ್ನು ಕೃತಕವಾಗಿ ಆಸ್ಪತ್ರೆಗಳಲ್ಲಿ ಸಪ್ಲಿಮೆಂಟ್ ಆಗಿ ಕೊಡುತ್ತಿದ್ದಾರೆ) ಆದ್ದರಿಂದ ಇದು ಗರ್ಭಿಣಿಗೆ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
3. ಸಿರಿಧಾನ್ಯಗಳು:
ನವಣೆ , ಸಾಮೆ, ಬ್ರೌನ್ ರೈಸ್, ಗೋದಿ, ಓಟ್ಸ್ ಇವುಗಳಲ್ಲಿ ಪೈಬರ್, ಐರನ್, ಮತ್ತು ವಿಟಮಿನ್ ಬಿ ಅಂಶ ಹೆಚ್ಚಾಗಿದ್ದು, ಗರ್ಭಿಣಿಗೆ ಹೆಚ್ಚು ಶಕ್ತಿಯನ್ನು ನೀಡುವುದರ ಜೊತೆಗೆ ಗರ್ಭಾವಸ್ಥೆಯ ಸಮಸ್ಯೆಗಳಾದ ಮಲಬದ್ಧತೆ, ಮತ್ತು ವಾಂತಿಯಂತಹ ಗಂಭೀರ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ.
4. ಮೊಟ್ಟೆ :
ಮೊಟ್ಟೆಯಲ್ಲಿ ಉತ್ತಮ ಪ್ರೊಟೀನ್ ಮತ್ತು ವಿಟಮಿನ್ ಅಂಶ ಹೆಚ್ಚಾಗಿರುತ್ತದೆ.
ಗರ್ಭಿಣಿಯು ದಿನಕ್ಕೆ 1 ಮೊಟ್ಟೆ ತಿನ್ನುವುದು, ಅದರಲ್ಲೂ ನಾಟಿ ಕೋಳಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಇನ್ನೂ ಉತ್ತಮವಾಗಿದೆ. ವಾರಕ್ಕೆ ಒಮ್ಮೆ ಕೋಳಿ ತಿಂಗಳಿಗೊಮ್ಮೆ ಕುರಿ ಮಾಂಸ ತಿನ್ನುವುದರಿಂದ ಪ್ರೊಟೀನ್ ಅಂಶ ಹೆಚ್ಚಾಗಿ ಸಿಗುತ್ತದೆ.
5. ಮೀನು:
ಮೀನುಗಳಲ್ಲಿ ಅದರಲ್ಲೂ ಸಾಲಾಮೋನ್ ನಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಇರುತ್ತದೆ ಇದು ಗರ್ಭಿಣಿಯ ಆರೋಗ್ಯ ಮತ್ತೆ ಮಗುವಿನ ಮೆದುಳು ಚುರುಕುಗೊಳ್ಳುವುದಕ್ಕೆ ಮತ್ತು ಕಣ್ಣಿನ ರೇಟಿನ ಬೆಳವಣಿಗೆಗೆ ಉತ್ತಮ ಆಹಾರವಾಗಿದೆ.
6. ಹಣ್ಣುಗಳು:
ಆರೆಂಜ್, ಆಪಲ್, ದಾಳಿಂಬೆ, ಏಲಕ್ಕಿ ಬಾಳೆ, ಕಿವಿ ಹಣ್ಣು, ಚೆರ್ರಿ ಹಣ್ಣುಗಳು ಹೆಚ್ಚು ಪೈಬರ್ ,ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶವನ್ನು ಹೊಂದಿದ್ದು ಗರ್ಭಿಣಿಯ ಜೀರ್ಣಕ್ರಿಯೆಗೆ ಮತ್ತು ಮಗುವಿನ ಬೆಳವಣಿಗೆಗೆ ಸಹಾಯಮಾಡುತ್ತವೆ. ದಿನಕ್ಕೆ ಕನಿಷ್ಠ2 ಹಣ್ಣುಗಳನ್ನು ತಿನ್ನುವುದು ಒಳ್ಳೆಯ ಅಭ್ಯಾಸ.
7.ಬೇಳೆ ಕಾಳುಗಳು :
ಹುರುಳಿ,(ದೇಹಕ್ಕೆ ತಂಪಾಗಿರುತ್ತದೆ), ತೊಗರಿಬೇಳೆ, ಕಡಲೆ, ಅವರೇಬೇಳೆ, ಇತ್ಯಾದಿ ಇವುಗಳಲ್ಲಿ ಪ್ರೊಟೀನ್ ಮತ್ತು ಕಬ್ಬಿಣ ಅಂಶ ಇರುವುದರಿಂದ ಗರ್ಭಿಣಿ ಮಹಿಳೆಗೆ ಶಕ್ತಿಯನ್ನು ಕೊಡುತ್ತದೆ.
8. ಒಣಗಿದ ಹಣ್ಣುಗಳು (Dried fruits) :
ಬಾದಾಮಿ, ಗೋಡಂಬಿ, ದ್ರಾಕ್ಷಿ, ವಾಲ್ನಟ್, ಪಂಪ್ಕಿನ್, ಪಿಸ್ತಾ, ಇವುಗಳಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಮತ್ತು ಗರ್ಭಿಣಿಗೆ ಬೇಕಾದ ಪೌಷ್ಟಿಕ ಅಂಶ ನೀಡುವುದರಿಂದ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದರಿಂದ ದೇಹಕ್ಕೆ ಶಕ್ತಿ ನೀಡುತ್ತವೆ.
9. ತರಕಾರಿಗಳು :
ನಾನು ಮೇಲೆ ತಿಳಿಸಿರುವ ಹಾಗೆ ರಾಸಾಯನಿಕವಲ್ಲದ ನೈಸರ್ಗಿಕವಾಗಿ(non-chemical) ಬೆಳೆದ ತರಕಾರಿಗಳಾದ ಕ್ಯಾರೆಟ್, ಬೀಟ್ರೋಟ್, ಬ್ರಕೋಲಿ, ಟೊಮೆಟೊ, ನವಿಲುಕೋಸು, ಬದನೆ, ಮುಂತಾದ ತರಕಾರಿಗಳಿಂದ ಗರ್ಭಿಣಿಗೆ ಬೇಕಾದ ವಿಟಮಿನ್, ಆಂಟಿ ಆಕ್ಸಿಡೆಂಟ್ ಅಂಶವನ್ನು ನೀಡುತ್ತವೆ.
10. ನೀರು :
ದೇಹವನ್ನು ತಂಪಾಗಿ ಇಡುವ ಮತ್ತೆ ದೇಹದಲ್ಲಿ ಯಾವುದೇ ರೀತಿಯ ಟಾಕ್ಸಿನ್ ಗಳನ್ನೂ ಹೊರ ಹಾಕಲು ನೀರು ತುಂಬಾ ಮುಖ್ಯವಾಗಿರುತ್ತದೆ. ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು.
ಅದೇ ರೀತಿ ನೀರಿನಂಶ ಇರುವ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ, ಕರಬೂಜ ಹಣ್ಣು ಗಳನ್ನೂ ತಿನ್ನುವುದರಿಂದ ದೇಹ ತಂಪಾಗಿರುತ್ತದೆ.
ಗರ್ಭಿಣಿಗೆ ಬೇಡವಾದ ಕೆಲವು ಆಹಾರಗಳು, ಅವುಗಳೆಂದರೆ:
ಕೆಲವು ಆಹಾರ ಪದಾರ್ಥಗಳು ಗರ್ಭಿಣಿಗೆ ತೊಂದರೆ ಉಂಟುಮಾಡಬಹುದು ಆದ್ದರಿಂದ ಈ ಆಹಾರಗಳನ್ನ ತಪ್ಪಿಸುವುದು ಉತ್ತಮ.
- ಜಂಕ್ ಫುಡ್ ಮತ್ತು ಪಾಸ್ಟ್ ಫುಡ್ , ಅಂದರೆ ಬೀದಿ ಬದಿ ಮಾರುವ ಪಾನಿ ಪುರಿ, ಗೋಬಿ, ಮಸಾಲೆ, ಇತ್ಯಾದಿ .
- ಹೆಚ್ಚು ಕೆಫೇನ್ ಇರುವ ಪಾನೀಯಗಳು, ಕಾಫಿ, ಟೀ, ಆದಷ್ಟೂ ತ್ಯಜಿಸುವುದೇ ಉತ್ತಮ, ಇದರಿಂದ ಮಲಬದ್ಧತೆ ಮತ್ತೆ ಅಜೀರ್ಣ ಕ್ರಿಯೆಯಾಗುತ್ತದೆ.
- ಅತಿಯಾದ ಮಸಾಲೆ ಮತ್ತು ಎಣ್ಣೆ ಬರಿತ ಪದಾರ್ಥಗಳು ಇವನ್ನು ಆದಷ್ಟೂ ದೂರವಿಡಬೇಕು.
- ಸರಿಯಾಗಿ ಬೇಯಿಸದ ಮಾಂಸ, ಇದು ಗರ್ಭಿಣಿಗೆ ಅಜೀರ್ಣ ವಾಗುತ್ತದೆ,
- ಪ್ಯಾಕೇಜ್ ಮತ್ತೆ ಸಂಸ್ಕರಿಸಿದ ಆಹಾರ, ಇದು ತುಂಬಾ ದಿನ ಸಂಸ್ಕರಿಸಿಡುವುದರಿಂದ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಈ ರೀತಿಯ ಆಹಾರಗಳನ್ನ ತಪ್ಪಿಸುವುದರಿಂದ ಮಗುವಿನ ಆರೋಗ್ಯ ಮತ್ತೆ ಗರ್ಭಿಣಿಯ ಆರೊಗ್ಯ ಉತ್ತಮವಾಗಿರುವಂತೆ ಕಾಪಾಡಬಹುದು.
ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿ ತೂಕ ನಿಯಂತ್ರಣ ಮಾಡುವುದು.
ಸಾಮಾನ್ಯವಾಗಿ ಗರ್ಭಿಣಿಯು ದಿನೇ ದಿನೇ ತೂಕ ಹೆಚ್ಚಾಗುವುದು ಗೊತ್ತಿರುವ ವಿಷಯ, ಆದರೆ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಗರ್ಭಿಣಿಗೆ ಮಧುಮೇಹ(diabetes), ಅಧಿಕ ರಕ್ತದೊತ್ತಡ(high blood pressure) ದಂತ ಕಾಯಿಲೆಗಳು ಬರುತ್ತವೆ.
ತೂಕ ನಿಯಂತ್ರಣಕ್ಕಾಗಿ ಗರ್ಭಿಣಿ ಮಾಡಬೇಕಿರುವ ಕೆಲಸ:
- ಊಟ ತಿಂದ ನಂತರ 10-20 ನಿಮಿಷ ನಡೆಯುವುದು ಅಭ್ಯಾಸ ಮಾಡಿಕೊಳ್ಳಬೇಕು, ಜೊತೆಗೆ ದಿನಕ್ಕೆ ಕನಿಷ್ಠ 30 ನಿಮಿಷ ನಿದಾನವಾಗಿ ವ್ಯಾಯಾಮ ಮಾಡಬೇಕು.
- ಪೌಷ್ಟಿಕ ಆಹಾರ ಸೇವನೆ ,
ಆಹಾರವನ್ನು ಸ್ವಲ್ಪ ಸ್ವಲ್ಪ ತಿನ್ನಬೇಕು 3 ಸರಿ ತಿನ್ನುವ ಆಹಾರವನ್ನು 4 ಸಾರಿ ತಿನ್ನಬೇಕು ಈಗೆ ಮಾಡಿದರೆ ತಿನ್ನುವುದು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸೇರುತ್ತದೆ. - ವೈದ್ಯರ ಸಲಹೆ.
ಕಡ್ಡಾಯವಾಗಿ ತಿಂಗಳಿಗೊಮ್ಮೆ ವೈದ್ಯರನ್ನು ಸಂಪರ್ಕಿಸಿ ಮಗುವಿನ ಸ್ಥಿತಿ, ಗರ್ಭಿಣಿಯ ಆರೋಗ್ಯ(BMI) ಪರೀಕ್ಷಿಸಿಕೊಳ್ಳಬೇಕು.
ಸರಿಯಾದ ಆಹಾರ ಮತ್ತು ಗುಣಮಟ್ಟದ ಜೀವನ ಶೈಲಿಯಿಂದ ಗರ್ಭಿಣಿಯು ತನ್ನ ಆರೋಗ್ಯ ಮತ್ತೆ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಗರ್ಭಿಣಿಗೆ ಬೇಕಿರುವುದು ಮನೆಯಲ್ಲಿ ಮುಖ್ಯವಾಗಿ ನೆಮ್ಮದಿಯ ವಾತಾವರಣ, ಮತ್ತು ಆಕೆಯೂ ಯಾವುದೇ ನಕಾರಾತ್ಮಕ ಮಾತುಗಳಿಗೆ ಕಿವಿಗೊಡದೆ, ಯಾವಾಗಲೂ ಒಳ್ಳೆಯ ಚಿಂತನೆ ಮಾಡುತ್ತ ಸಕಾರಾತ್ಮಕವಾಗಿ ನಡೆದುಕೊಳ್ಳಬೇಕು.
ಪೌಷ್ಠಿಕ ಆಹಾರ, ಆಗಾಗ ವೈದ್ಯಕೀಯ ನೆರವು, ಇದಕ್ಕೆ ಪ್ರಮುಖವಾಗಿ ಗರ್ಭಿಣಿಯು ಸರಿಯಾದ ಪೌಷ್ಟಿಕಾಂಶ ಬರಿತ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ಗರ್ಭದಾರಣೆ ಅನುಭವಿಸಬಹುದಾಗಿದೆ. ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಸಮತೋಲಿತ ಪೌಷ್ಟಿಕಾಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ತಾಯಿ ಮಗು ಇಬ್ಬರೂ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ.
ನಾನು ಬರೆದಿರುವ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತೆ ಬೇರೆ ಯಾವ ವಿಷಯದ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದು ಕಾಮೆಂಟ್ಸ್ ರೂಪದಲ್ಲಿ ತಿಳಿಸಿ ಧನ್ಯವಾದಗಳು .
Frequently Asked Questions
What should i eat first month of pregnancy?
In the first month of pregnancy, it is good to eat vitamin B6 rich foods like salamon fish, small banana, some nuts etc.
How many calories do pregnant women should take on daily?
Pregnant women need extra 300-400 calories a day its around 2000-2400 calories is good for her and baby health.
Is Rice good to eat during pregnancy?
Yes, eating rice can supoort good bowel movements to mother. at the same time eating brown rice can lead to good iron, fiber contents.

Pingback: ಗರ್ಭವಾಸ್ಥೆಯಲ್ಲಿ ಸ್ತ್ರೀ ಆರೋಗ್ಯ ಯಾವ ರೀತಿ ಕಾಪಾಡಿಕೊಳ್ಳಬೇಕು
Must read content i like it, need to follow this nutrition food schedule.
Pingback: 10 Ways to Reduce Stress and Anxeity Natuarally - In kannada
Pingback: ಥೈರಾಯ್ಡ್(Thyroid) ಅಂದರೆ ಏನು? ನಿಮಗೆ ಗೊತ್ತಿರದ 5 ಕಾರಣಗಳು
Pingback: ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದೆಯೇ- ಇಲ್ಲಿದೆ ಪರಿಹಾರ
Pingback: Pregnancy Diet : Complete Food Plan for 9 Months Period