ನಮ್ಮ ಇತ್ತೀಚಿನ ಜೀವನಶೈಲಿ ಯಾವ ರೀತಿ ಇದೆ ಎಂದರೆ, ನಮ್ಮ ದೇಹದ ಡಯಟ್ ಗೆ, ವ್ಯಾಯಾಮಕ್ಕೆ ಸರಿಯಾಗಿ ಸಮಯ ಕೊಡುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಈಗಿನ ಫ್ಯಾಟ್ ಅಂಶವಿರುವ ಆಹಾರಗಳನ್ನು ತಿನ್ನುವುದರಿಂದ ಎಲ್ಲರೂ ದಪ್ಪ ಮತ್ತೆ ತೂಕ ಹೆಚ್ಚಾಗುತ್ತಿದ್ದರೆ. ಇಂತ ಸಮಯದಲ್ಲಿ ತುಂಬಾ ಜನರು ಕೆಲವೊಂದು ಸುಲಭವಾಗಿ ತೂಕ ಕಡಿಮೆ Weight Loss ಆಗಲು ಕೆಲವೊಂದು ದಾರಿಗಳನ್ನು ಉಡುಕುತಿದ್ದಾರೆ, ಅಂತಹವರಿಗೆ ಬೆಳಿಗ್ಗೆ ಸಮಯದಲ್ಲಿ ಕೆಲವೊಂದು ನೈಸರ್ಗಿಕವಾಗಿ ಸಿಗುವ ಜ್ಯೂಸ್ ಗಳನ್ನ ಕುಡಿಯುವುದರಿಂದ ದೇಹದ ತೂಕ ಕಡಿಮೆಮಾಡಬಹುದು.
ಬೆಳಿಗ್ಗೆ ಕಾಲಿಹೊಟ್ಟೆಯಲ್ಲಿ ನಾನು ತಿಳಿಸುವ ಕೆಲವೊಂದು ಜ್ಯೂಸ್ ಗಳನ್ನೂ ಕುಡಿಯುವುದರಿಂದ ದೇಹದ ಮೆಟಬಾಲಿಸಂ ಅನ್ನು ಜಾಸ್ತಿ ಮಾಡಿ, ಫ್ಯಾಟ್ ಕರಗಿಸಲು ಸಹಾಯ ಮಾಡುತ್ತದೆ. ನಾನು ಈ ಬ್ಲಾಗ್ ನಲ್ಲಿ ತೂಕ ಕಡಿಮೆ ಮಾಡುವ ಕೆಲವೊಂದು ಮುಖ್ಯವಾದ Juice ಬಗ್ಗೆ ತಿಳಿಸುತ್ತೇನೆ.
Table of Contents
Toggleತೂಕ ಕಡಿಮೆ Weight Loss ಆಗಲು ಬೆಳಿಗ್ಗೆಯೇ ಯಾಕೆ ಜ್ಯೂಸುಗಳನ್ನ ಕುಡಿಯಬೇಕು?
ರಾತ್ರಿ ತಿಂದ ಆಹಾರ ಬೆಳೆಗಿನಷ್ಟರಲ್ಲಿ ಸಂಪೂರ್ಣ detox ಆಗಿ ಬೆಳಿಗ್ಗೆ ಕಾಲಿ ಹೊಟ್ಟೆ ಇರುತ್ತದೆ. ಈ ಸಮಯದಲ್ಲಿ ನಾವು ಕುಡಿಯುವ ನೈಸರ್ಗಿಕ ಜ್ಯೂಸು ಗಳು ತೂಕ ಕಡಿಮೆ ಮಾಡಲು ಸಹಕರಿಸುತ್ತವೆ. ಮುಖ್ಯವಾಗಿ,
ಅನೇಕರು ತೂಕ ಕಡಿಮೆ ಮಾಡಿಕೊಳ್ಳಲು ಡಯಟ್, ಮತ್ತೆ ವ್ಯಾಯಾಮವನ್ನು ತಪ್ಪದೆ ಮಾಡುತ್ತಾರೆ. ಆದರೂ ತೂಕ ಕಡಿಮೆಯಾಗುವುದಿಲ್ಲ. ಅಂತಹವರಿಗೆ ನೈಸರ್ಗಿಕವಾಗಿ ತಯಾರಿಸುವ ಜ್ಯೂಸ್ ಗಳು ತೂಕ ಕಡಿಮೆ ಆಗಲು ಸಹಾಯ ಮಾಡುತ್ತವೆ.
ಈ ಜ್ಯೂಸ್ ಗಳನ್ನ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಿರುವ ವಿಟಮಿನ್ಸ್, ಐರನ್, ಮತ್ತು ಒಳ್ಳೆಯ ಆಂಟಿಆಕ್ಸಿಡೆಂಟ್ಗಳನ್ನ ಕೊಡುತ್ತವೆ. ಇವು ದೇಹದ ಮೆಟಬಾಲಿಸಂ ಅನ್ನು ಜಾಸ್ತಿ ಮಾಡಿ ಅನವಶ್ಯಕ ಫ್ಯಾಟ್ ಅನ್ನು ಕರಗಿಸಲು ಸಹಾಯಮಾಡುತ್ತವೆ.
- ದೇಹದ ಮೆಟಬಾಲಿಸಂ ಅನ್ನು ನಿದಾನವಾಗಿ ಜಾಸ್ತಿಮಾಡುತ್ತವೆ.
- ದೇಹದಲ್ಲಿ ಇರುವ ಕೆಲವೊಂದು ಬೇಡವಾದ ವಿಷಾಪಧಾರ್ಥಗಳು ಹೊರಹೋಗುತ್ತವೆ.
- ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
- ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿರುವ ಫ್ಯಾಟ್ ಕಡಿಮೆಯಾಗುತ್ತದೆ.
- ಹಸಿವಾಗುವುದನ್ನು ನಿಯಂತ್ರಿಸುತ್ತವೆ.
- ಜೀರ್ಣಕ್ರಿಯೆಯನ್ನು ಸರಿಪಡಿಸುತ್ತವೆ.
ತೂಕ ಜಾಸ್ತಿಯಾಗಲು ಪ್ರಮುಖ ಕಾರಣಗಳು.
ತೂಕ ಜಾಸ್ತಿಯಾಗಲು ಹಲವಾರು ಕಾರಣಗಳಿವೆ ಅದರಲ್ಲಿ ಕೆಲವೆಂದರೆ :
- ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆ.
- ಜಂಕ್ ಫುಡ್ ಮತ್ತೆ ಪಾಸ್ಟ್ ಫುಡ್ ತಿನ್ನುವುದು.
- ಹೆಚ್ಚು ಸಕ್ಕರೆ ಬಳಸಿರುವ ಸಿಹಿ ಪದಾರ್ಥಗಳನ್ನು ತಿನ್ನುವುದು.
- ಸರಿಯಾದ ನಿಡೀ ಮಾಡದೆ ಇರುವುದು.
- ಮಹಿಳೆಯರಲ್ಲಿ ಹಾರ್ಮೋನ್ಗಳ ಬದಲಾವಣೆ.
- ಕೆಲವರು ಒತ್ತಡದ ಜೀವನದಿಂದ ತೂಕ ಜಾಸ್ತಿಯಾಗುತ್ತಾರೆ.
ತೂಕ ಕಡಿಮೆ Weight Loss ಮಾಡಲು 10 ನೈಸರ್ಗಿಕ ಜ್ಯೂಸುಗಳು :
- ನಿಂಬೆ ಹಣ್ಣಿನ ಜ್ಯೂಸ್ :
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ದೇಹದಲ್ಲಿರುವ ಫ್ಯಾಟ್ ಅನ್ನು ಕರಗಿಸಲು ಸಹಾಯಮಾಡುತ್ತದೆ. ಇದನ್ನು ಬೆಳಿಗ್ಗೆ ಬಿಸಿನೀರಿನಲ್ಲಿ ನಿಂಬೆರಸವನ್ನು ಮಿಕ್ಸ್ ಮಾಡಿ ಒಂದು ಗ್ಲಾಸ್ ಕುಡಿಯಬೇಕು.
ಇದರಲ್ಲಿ ಮೆಟಬಾಲಿಸಂ ಅನ್ನು ಜಾಸ್ತಿ ಮಾಡುವ ಗುಣವಿದೆ. ಮತ್ತೆ ದೇಹವನ್ನು detox ಮಾಡುತ್ತೆ ಮತ್ತೆ ಬೇಗ Weight Loss ಆಗುತ್ತೆ. - ಸೆಲರಿ ಸೊಪ್ಪಿನ ಜ್ಯೂಸ್ :
ಇದರಲ್ಲಿ ನೀರಿನಂಶ ಜಾಸ್ತಿ ಇರುತ್ತದೆ, ಮತ್ತೆ ಕಡಿಮೆ ಕ್ಯಾಲೋರಿ ಇರುತ್ತೆ, ಇದನ್ನು ಬೆಳಿಗ್ಗೆ ಕುಡಿಯುವುದರಿಂದ ಹೊಟ್ಟೆ ಉಬ್ಬರ, ತೇಗು ಬರುವುದು ಎಲ್ಲವೂ ಕಡಿಮೆಯಾಗುತ್ತದೆ. - ಜೇನು ತುಪ್ಪ :
ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಫ್ಯಾಟ್ ಕರಗಿಸಲು ಸಹಾಯಮಾಡುತ್ತದೆ. - ಜೀರಿಗೆ ನೀರು :
ಬಿಸಿ ನೀರಿಗೆ ಜೀರಿಗೆ ಹಾಕಿ ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಬೆಳಿಗ್ಗೆ ಒಂದು ಗ್ಲಾಸ್ ಕುಡಿಯುವುದರಿಂದ ನಮ್ಮ ಜೀರ್ಣ ಕ್ರಿಯೆ ಸುಧಾರಿಸುತ್ತದೆ, ಮತ್ತೆ ದೇಹದ ಬೊಜ್ಜು ಕರಗಲು ಸಹಾಯ ಮಾಡುತ್ತದೆ. - ಹಸಿರು ತರಕಾರಿಗಳ ಜ್ಯೂಸ್ :
ಬೆಳಿಗ್ಗೆ ಕಾಳಿ ಹೊಟ್ಟೆಯಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿಯುವುದರಿಂದ, ದೇಹಕ್ಕೆ ಕಡಿಮೆ ಕ್ಯಾಲೋರಿ ಅಂಶ ನೀಡಿ ತೂಕ ಕಡಿಮೆ Weight Loss ಮಾಡಲು ಸಹಾಯ ಮಾಡುತ್ತದೆ.
ಒಂದು ತಿಂಗಳು ಒಂದು ದಿನವೂ ಮಿಸ್ ಮಾಡದೆ ಕುಡಿಯಬೇಕು. - ಮೆಂತೆ ನೀರಿನ ಜ್ಯೂಸ್ :
ರಾತ್ರಿ ಮೆಂತೆ ಕಾಲುಗಳನ್ನು ನೆನೆಸಿ ಬೆಳಿಗ್ಗೆ ಎದ್ದು ಅದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿರುವ ಪ್ಯಾಟ್ ಕಡಿಮೆಯಾಗಲು ಸಹಾಯಮಾಡುತ್ತದೆ. ಇದು ಬ್ಲಡ್ ಶುಗರ್ ಕಡಿಮೆ ಮಾಡಿ ತುಂಬಾ ಹಸಿವಾಗುವುದನ್ನು ತಪ್ಪಿಸುತ್ತದೆ. - ದಾಳಿಂಬೆ ಜ್ಯೂಸ್ :
ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದ್ದು ಇದು ದೇಹದ ಕೊಬ್ಬು ಶೇಖರಣೆ ಆಗಲು ಸಹಕರಿಸುವುದಿಲ್ಲ, ಇದನ್ನು ಬೆಳಿಗ್ಗೆ ಕುಡಿಯುವುದರಿಂದ ದೇಹಕ್ಕೆ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಬದಲಿಗೆ ಪೌಷ್ಟಿಕ ಆಹಾರವನ್ನು ತಿನ್ನಲು ದೇಹ ಪ್ರೋತ್ಸಾಹಿಸುತ್ತದೆ. - ಗ್ರೀನ್ ಟೀ :
ಇದರಲ್ಲಿಯೂ ಆಂಟಿ ಆಕ್ಸಿಡೆಂಟ್ ಅಂಶ ಜಾಸ್ತಿ ಇದ್ದು, ಫ್ಯಾಟ್ ಬೇಗ ಕರಗುತ್ತದೆ, ಮತ್ತೆ ದೇಹ ಶಕ್ತಿಯುತವಾಗುತ್ತದೆ. ಇದನ್ನು ಸಂಜೆ ಸಮಯದಲ್ಲಿ ಕುಡಿಯಬೇಕು. - ಬಿಟ್ರೋಟ್ ಜ್ಯೂಸ್ :
ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು ಹೆಚ್ಚು ಫೈಬರ್ ಅಂಶ ಇರುತ್ತದೆ. ಆದ್ದರಿಂದ ನಾವು ಸಿಕ್ಕ ಸಿಕ್ಕದೆಲ್ಲಾ ತಿನ್ನದೇ ಕಡಿಮೆ ಊಟ ಮಾಡಲು ಸಹಕರಿಸುತ್ತದೆ.
ಇದನ್ನು ಬೆಳಿಗ್ಗೆ ಎಡ್ಡಾ ತಕ್ಷಣ ಒಂದು ಗ್ಲಾಸ್ ಕುಡಿಯಬೇಕು. - ಸೌತೇಕಾಯಿ ಜ್ಯೂಸ್ :
ಬೆಳಿಗ್ಗೆ ಎದ್ದ ತಕ್ಷಣ ಸೌತೆಕಾಯಿಯಲ್ಲಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಮತ್ತೆ ದೇಹ detox ಆಗಿ ತೂಕ ಕಡಿಮೆ ಆಗಲು ಸಹಾಯಮಾಡುತ್ತದೆ.
ಇವನ್ನು ಬಿಟ್ಟು ಇನ್ನು ಕೆಲವೊಂದು ಜ್ಯೂಸ್ ಗಳನ್ನೂ ಕುಡಿಯಬಹುದು. ಅವೆಂದರೆ ಆಮ್ಲ ಜ್ಯೂಸ್, ಕ್ಯಾರೆಟ್ ಜ್ಯೂಸ್, ಹಾಗಲಕಾಯಿ ಜ್ಯೂಸ್, ಶುಂಠಿ ನೀರು, ಹರಿಶಿನ ನೀರು, ಇತ್ಯಾದಿ ಇವುಗಳನ್ನು ದಿನನಿತ್ಯ ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಪದಾರ್ಥಗಳು ಹೊರಹೋಗಿ ದೇಹ ಸದೃಢವಾಗಿ Weight Loss ಆಗುತ್ತದೆ.
ಈ ಜ್ಯೂಸ್ ಗಳನ್ನೂ ಯಾವ ರೀತಿ ಕುಡಿಯಬೇಕು?
- ಸಾಧ್ಯವಾದಷ್ಟೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ, ಏಕೆಂದರೆ ರಾತ್ರಿ ತಿಂದ ಆಹಾರ ಸಂಪೂರ್ಣ ಜೀರ್ಣವಾಗಿ ಫ್ಯಾಟ್ ಬರ್ನ್ ಆಗಲು ಬೆಳಿಗ್ಗೆ ಒಳ್ಳೆಯ ಸಮಯ.
- ದಿನನಿತ್ಯ ಕನಿಷ್ಠ 1 ತಿಂಗಳು ಕುಡಿದರೆ ನಿಮಗೆ ದೇಹದ ರಿಸಲ್ಟ್ ಗೊತ್ತಾಗುತ್ತದೆ. ಅದು ಬಿಟ್ಟು ಜೋಶ್ ಅಲ್ಲಿ 4 ದಿನ ಕುಡಿದು ನಂತರ ಬಿಟ್ಟು ಬಿಡುವುದು ವೇಸ್ಟ್ ಆಗುತ್ತದೆ.
- ಈ ಜ್ಯೂಸ್ ಜೊತೆಗೆ ಬೆಳಿಗ್ಗೆ ಸಾಧ್ಯವಾದಷ್ಟೂ ಜಾಗಿಂಗ್ ಮಾಡಿ ಆಗ ದೇಹದಲ್ಲಿರುವ ಫ್ಯಾಟ್ ತನ್ನಷ್ಟಕ್ಕೆ ತಾನೇ ಕರಗಲು ಆರಂಭಿಸುತ್ತದೆ.
ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಜ್ಯೂಸ್ ಗೆ ಯಾವುದೇ ರೀತಿಯ ಸಕ್ಕರೆ ಸೇರಿಸಬೇಡಿ. ಹಾಗೆ ಕುಡಿಯಿರಿ, ಕೆಲವೊಂದು ಜ್ಯೂಸ್ ಕಹಿ ಇರುತ್ತೆ ಪರವಾಗಿಲ್ಲ, ಕಹಿ ಕೇವಲ ನಾಲಿಗೆ ರುಚಿ ಮಾತ್ರ ಆದರೆ ಹೊಟ್ಟೆಗೆ ಓದ ಮೇಲೆ ಫ್ಯಾಟ್ ಕರಗಲು ಸಕ್ಕರೆ ಬಳಸಬೇಡಿ.
ಇದನ್ನೂ ಓದಿ : 60 ದಿನದಲ್ಲಿ ತೂಕ ಜಾಸ್ತಿ ಮತ್ತೆ ಕಡಿಮೆ ಮಾಡಲು ಡಯಟ್ ಪ್ಲಾನ್.
ತೂಕ ಕಡಿಮೆಯಾಗಲು ಬೇರೆ ಮಾರ್ಗಗಳೆಂದರೆ.
- ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ, ಏಕೆಂದರೆ ನೀರಿನಲ್ಲಿ ನಿಮ್ಮ ದೇಹದ ಬೇಡವಾದ ವಸ್ತುಗಳನ್ನು ಹೊರಹಾಕುವ ಸಾಮರ್ಥ್ಯ ಇದೆ, ಊಟ ಮಾಡುವ ೨೦ ನಿಮಿಷ ಮುಂಚೆ ನೀರು ಕುಡಿಯಬೇಕು. ಮತ್ತೆ ಜಾಸ್ತಿ ನೀರು ಕುಡಿಯುವುದರಿಂದ ಸ್ವಲ್ಪ ಬೊಜ್ಜು ಕರಗುತ್ತದೆ.
- ಸಾಧ್ಯವಾದಸ್ತುವು ಮನೆಯ ಊಟ ಮಾಡಿ. ಹೋಟೆಲ್ ಊಟ, ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪಧಾರ್ಥಗಳು, ಇವನ್ನೆಲ್ಲ ತಿನ್ನಬೇಡಿ.
- ದಿನಕ್ಕೆ ಕನಿಷ್ಠ ಅಂದರೂ 1 ಘಂಟೆ ವ್ಯಾಯಾಮ ಮಾಡಲೇಬೇಕು. ನಾನು ಜಾಸ್ತಿ ತೂಕ ಇಲ್ಲ ನಾನ್ಯಾಕೆ ವ್ಯಾಯಾಮ ಮಾಡಬೇಕು ಅಂತ ತುಂಬಾ ಜನ ಬೇಜವಾಬ್ದಾರಿ ತೋರಿಸುತ್ತಾರೆ. ಆದರೆ ಪ್ರತಿಯೊಬ್ಬರೂ ವ್ಯಾಯಾಮ ಮಾಡುವುದರಿಂದ ದೇಹ ಸದೃಢವಾಗಿರುತ್ತದೆ.
- ದಿನಕ್ಕೆ ಕನಿಷ್ಠ 7 ಘಂಟೆ ನಿದ್ದೆ ಮಾಡಿ, ನಿದ್ದೆ ಚೆನ್ನಾಗಿದ್ದರೆ ಆರೋಗ್ಯ ಚನ್ನಾಗಿರುತ್ತದೆ.
ತೂಕ ಕಡಿಮೆ ಆಗುವ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳು
- ಜ್ಯೂಸ್ ಮಾತ್ರ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾರೆ, ಎನ್ನುವುದು ತಪ್ಪು . ಔದು ನಾನು ಮೇಲೆ ತಿಳಿಸಿರುವ ಜ್ಯೂಸ್ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾರೆ, ಅದಕ್ಕೆ ತಕ್ಕಂತೆ ಆಹಾರ, ವ್ಯಾಯಾಮ, ಎಲ್ಲವೂ ಜೊತೆಯಲ್ಲೂ ಮಾಡಬೇಕಿರುತ್ತದೆ.
- ಇದು ಕುಡಿದ ತಕ್ಷಣ ದೇಹದಲ್ಲಿ ರಿಸಲ್ಟ್ ಕಾಣಿಸುತ್ತದೆ, ಇದು ತಪ್ಪು. ಕುಡಿದ ತಕ್ಷಣ ಏನು ಗೊತ್ತಾಗುವುದಿಲ್ಲ, ಬದಲಿಗೆ ನಿಧಾನವಾಗಿ ದಿನಕಳೆದಂತೆ ನಿಮಗೆ ಇದರ ರಿಸಲ್ಟ್ ತಿಳಿಯುತ್ತದೆ.
ಕೆಲವೊಂದು ವೈಜ್ಞಾನಿಕ ಸತ್ಯಗಳು :
- ವಿಟಮಿನ್ ಸಿ ಇರುವ ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ಅದು ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ.
- ಫೈಬರ್ ಆಹಾರ ತಿನ್ನುವುದರಿಂದ ಅಥವಾ ಪೈಬರ ಅಂಶವಿರುವ ಜಸ್ ಕುಡಿಯುವುದರಿಂದ ಹಸಿವು ಕಂಟ್ರೋಲ್ ಆಗುತ್ತದೆ.
- ಆಂಟಿಆಕ್ಸಿಡೆಂಟ್ಗಳು ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.
ಕೊನೆಯಮಾತು :
ತೂಕ ಕಡಿಮೆಯಾಗಲು ನಾನು ತಿಳಿಸಿರುವ ಈ ಜ್ಯೂಸ್ ಗಳು ಖಂಡಿತ ಸಹಾಯ ಮಾಡುತ್ತವೆ. ಆದರೆ ಇಷ್ಟೇ ಸಾಕಾ ? ಎಂದರೆ ಖಂಡಿತ ಇಲ್ಲ ಜ್ಯೂಸ್ ಗಳು ಒಂದು ಸಪ್ಲಿಮೆಂಟ್ ಆಗಿ ವರ್ಕ್ ಆಗುತ್ತವೆ, ಜೊತೆಗೆ ನಿಯಮಿತ ಆಹಾರ, ಡಯಟ್, ಒಳ್ಳೆಯ ವ್ಯಾಯಾಮ, ಮತ್ತೆ ಆರೋಗ್ಯವಾಗಿರುವಂತ ಜೀವನಶೈಲಿ ಈ ಎಲ್ಲಾ ಅಂಶಗಳು ಖಂಡಿತವಾಗಿ ನಿಮ್ಮ ದೇಹದ ತೂಕ ಕಡಿಮೆಯಾಗಲು ಸಹಕರಿಸುತ್ತವೆ.
ನೀವು ತೂಕ ಕಡಿಮೆಯಾಗಿ ಆರೋಗ್ಯವಂತರಾಗಿದ್ದರೆ ನೀವು ಚನ್ನಾಗಿರುವುದರ ಜೊತೆಗೆ ನಿಮ್ಮ ಕುಟುಂಬದವರನ್ನೂ ಚನ್ನಾಗಿ ನೋಡಿಕೊಳ್ಳುತ್ತೀರಿ. ನಿಮ್ಮ ಕುಟುಂಬ ಚನ್ನಾಗಿದ್ದರೆ, ಊರು, ನಂತರ ದೇಶ ಈಗೆ ನಿಮ್ಮ ಏಳಿಗೆಯಲ್ಲಿ ದೇಶದ ಏಳಿಗೆಯಿದೆ.
FAQs :
ಬೆಳಗ್ಗಿನ ಜ್ಯೂಸ್ ಕುಡಿಯುವುದರಲ್ಲಿ ಯಾವುದು ಬೆಸ್ಟ್ ?
ನಿಂಬೆ ಹಣ್ಣು ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದು ದೇಹವನ್ನು detox ಮಾಡುವುದಕ್ಕೆ ಸಹಕಾರಿಯಾಗುತ್ತದೆ.
ಈ ಜ್ಯೂಸ್ ಅನ್ನು ಯಾವಾಗ ಕುಡಿಯಬೇಕು?
ಬೆಳಿಗ್ಗೆ ಎದ್ದ ತಕ್ಷಣ ಬ್ರೆಷ್ ಮಾಡಿ ಕಾಳಿ ಹೊಟ್ಟೆಯಲ್ಲಿ ಕುಡಿಯಬೇಕು.
ಎಷ್ಟು ದಿನದಲ್ಲಿ ತೂಕ ಇಳಿಯುವುದರ ರಿಸಲ್ಟ್ ಗೊತ್ತಾಗುತ್ತದೆ?
ಒಂದು ದಿನವೂ ತಪ್ಪದೆ ಕುಡಿದರೆ, ಖಂಡಿತ 4-6 ವಾರಗಳಲ್ಲಿ ನೀವು ಅಂದುಕೊಂಡ ರಿಸಲ್ಟ್ ಸಿಗುತ್ತದೆ.
