ಯಾವುದೇ ವ್ಯೆಕ್ತಿಯ ಅಂದ ಕಾಣುವುದು ಅವರ ಮುಖದಿಂದ. ಅದರಲ್ಲೂ ಅವರ hairstyle ಅವರ ವ್ಯೆಕ್ತಿತ್ವದ ಒಂದು ಭಾಗವಾಗಿ ಕಾಣುತ್ತದೆ.
ಯಾವುದೇ ವ್ಯಕ್ತಿಗೆ ಸರಿಯಾದ hairstyle ಇದ್ದರೆ ಅವರ ಆತ್ಮವಿಶ್ವಾಸ (confidence) ಜಾಸ್ತಿಯಾಗುತ್ತದೆ. ಆದರೆ ಕೇವಲ hairstyle ಚೆನ್ನಾಗಿದ್ದರೆ ಸಾಕಾಗುವುದಿಲ್ಲ, ಅವರ ಕೂದಲಿನ ಆರೋಗ್ಯವೂ ಅಷ್ಟೇ ಚೆನ್ನಾಗಿರಬೇಕು.
ಸರಿಯಾದ ಕೂದಲಿನ ಆರೈಕೆ, ಸರಿಯಾದ Hair Cutting ಮತ್ತೆ ಮನೆಯಲ್ಲೇ ತಯಾರಿಸಬಹುದಾದ ನೈಸರ್ಗಿಕ ಚಿಕಿತ್ಸೆಗಳಿಂದ, ನಿಮ್ಮ ಕೂದಲನ್ನ ಸುಂದರವಾಗಿಯೂ, ಆರೋಗ್ಯವಾಗಿಯೂ ಇಟ್ಟುಕೊಳ್ಳಬಹುದು.
ನಾವು ಈ ಬ್ಲಾಗ್ ನಲ್ಲಿ ನಮ್ಮ ಕೂದಲಿನ ರಕ್ಷಣೆ, ಕೂದಲು ಉದುರಲು ಕಾರಣಗಳು, hairstyle ನಲ್ಲಿ ಮಹಿಳೆಯರಿಗೆ ಮತ್ತು ಗಂಡಸರಿಗೆ ಯಾವ ರೀತಿಯ ಟೈಪ್ಸ್ ಇದಾವೆ, ಟ್ರಿಮ್ಮಿಂಗ್, ನೈಸರ್ಗಿಕ ಕೂದಲಿನ ಆರೋಗ್ಯ, ಎಲ್ಲವನ್ನು ತಿಳಿಯೋಣ.
Table of Contents
Toggleನಮ್ಮ ಕೂದಲು ಆರೋಗ್ಯವಾಗಿರಲು Healthy Hair ಯಾವ ರೀತಿಯ ಆರೈಕೆ ಮಾಡಬೇಕು?
ಕೊದಲಿನ ಆರೈಕೆ ತುಂಬಾ ಅಗತ್ಯ, ಕೆಲವರಿಗೆ ತಲೆಯಲ್ಲಿ ಕೂದಲು ಇರುವುದಿಲ್ಲ ಅಂತಹವರನ್ನು ಸಮಾಜದಲ್ಲಿ ನೋಡುವ ರೀತಿಯೇ ಬೇರೆ.
ಆದ್ದರಿಂದ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಕೂದಲು ಸರಿಯಾಗಿ ಬೆಳೆಯುತ್ತವೆ.
- ಪೌಷ್ಠಿಕ ಆಹಾರ ಸೇವನೆ : ನಾವು ತಿನ್ನುವ ಆಹಾರದಲ್ಲಿ ಸರಿಯಾದ ಪ್ರೊಟೀನ್, ವಿಟಮಿನ್ಸ್, ಐರನ್, ಜಿಂಕ್, ಅಂಶಗಳು ಕೂಡಿರಬೇಕು.
ಅಂದರೆ ಹಸಿರು ತರಕಾರಿಗಳು, ಸೊಪ್ಪುಗಳು, ಹಣ್ಣುಗಳು, ಸರಿಯಾಗಿ ತಿನ್ನುವುದರಿಂದ ಕೂದಲಿನ ಆರೋಗ್ಯ ಚನ್ನಾಗಿರುತ್ತದೆ. ಊಟದಲ್ಲಿ ಇರುವ ಕರಿಬೇವು ಸೊಪ್ಪು ತಿನ್ನುವುದರಿಂದ ಕೂದಲು ಯಾರಿಗೆ ಕಪ್ಪಿಲ್ಲವೋ ಅಂತಹವರಿಗೆ ಕಪ್ಪಾಗುತ್ತವೆ. - ತಲೆ ಸ್ನಾನ : ಕೆಲವರು ದಿನನಿತ್ಯ ತಲೆ ಸ್ನಾನ ಮಾಡುತ್ತಾರೆ ಅದು ತಪ್ಪು. ಆದರೆ ವಾರಕ್ಕೆ 3 ಬಾರಿ ಅಂದರೆ ದಿನ ಬಿಟ್ಟು ದಿನ ತಲೆಗೆ ಶಿಕಾಕಾಯಿ, ಅಥವಾ ನೈಸರ್ಗಿಕ ಶಾಂಪೂಗಳನ್ನು ಬಳಸಿ ಸ್ನಾನ ಮಾಡಬೇಕು.
- ನೈಸರ್ಗಿಕ ಕಂಡೀಷನರ್ ಬಳಕೆ : ಇದು ನಮ್ಮ ಕೂದಲನ್ನು ಡ್ರೈ ಆಗದಂತೆ ನೋಡಿಕೊಳ್ಳುತ್ತದೆ, ಬದಲಿಗೆ ಕೂದಲು ಪ್ರೆಶ್ ಈಗ ತಾನೇ ಸ್ನಾನ ಮಾಡಿದ ರೀತಿಯಲ್ಲಿ ಇರುತ್ತವೆ. Parachute Hair Growth Oil ಇದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಬಳಸಬಹುದು.
- ಎಲೆಕ್ಟ್ರಿಕ್ ಉತ್ಪನ್ನಗಳ ಬಳಕೆ ನಿಲ್ಲಿಸುವುದು : ಕೆಲವರು ಸ್ನಾನ ಮಾಡಿದ ತಕ್ಷಣ ಕೂದಲು ತೇವ ಆರಿಸುವುದಕ್ಕೆ ಡ್ರೈಯರ್ ಬಳಸುತ್ತಾರೆ. ಇದು ಕೂದಲನ್ನು ನಿಧಾನವಾಗಿ ಹಾಳುಮಾಡುತ್ತದೆ, ನಂತರ ಸ್ಟ್ರೈಟನರ್ ಬಳಸಿ ಕೂದಲನ್ನು ನೇರ ಮಾಡಲು ಹೋಗುತ್ತಾರೆ, ಇದು ಕೂದಲು ಒಡೆಯಲು ಸಹಾಯ ಮಾಡುತ್ತದೆ.ಆದ್ದರಿಂದ ಇವನ್ನು ಬಳಸಬಾರದು.
- ನೀರು ಕುಡಿಯುವುದು : ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಂಡರೆ ಕೊದಲು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ. ಚನ್ನಾಗಿ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ರಕ್ತ ಸರಿಯಾಗಿ ಸರ್ಕುಲೇಷನ್ ಆಗುತ್ತದೆ. ಆಗ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಸರಿಯಾಗಿ ತಲುಪಿಸಲು ಸಹಾಯ ಮಾಡುತ್ತವೆ. ಆಗ ಕೂದಲು ಸರಿಯಾಗಿ ಬೆಳೆಯುತ್ತವೆ.
ನಾವು ಅನುಸರಿಸಬೇಕಿರುವ ಕೆಲವೊಂದು ನೈಸರ್ಗಿಕ Hairstyle Methods.
ನಾವು ಸಲೂನ್ ಶಾಪ್ ಗೆ ಹೋದಾಗ ನಾನಾ ತರಹ hairstyles ಇರುತ್ತವೆ. ಆದರೆ ಅವೆಲ್ಲವೂ ಅಷ್ಟೊಂದು ನ್ಯಾಚುರಲ್ ಲುಕ್ ಕೊಡುವುದಿಲ್ಲ. ನಾವು ಸ್ವಲ್ಪ ಡೀಸೆಂಟ್ ಆಗಿ ಕಾಣಲು ಮತ್ತು ಕೂದಲಿಗೆ ಯಾವುದೇ ಹಾನಿಯಾಗದಂತೆ ಇಂದಿನ ಟ್ರೆಂಡ್ ನಲ್ಲಿ ಕೆಲವು ನ್ಯಾಚುರಲ್ hairstyle ಇವೆ ಅವುಗಳನ್ನ ನೋಡೋಣ ;
ಲೇಯರ್ ಕಟ್ : ಈ hairstyle ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೆ, ನ್ಯಾಚುರಲ್ ಆಗಿ ಕಾಣುತ್ತದೆ. ಎಲ್ಲಿಗಾದರೂ Functions, ಕಾರ್ಯಕ್ರಮಗಳಿಗೆ ಹೋಗುವ ಮೊದಲು ಈ hairstyle ಮಾಡಿದರೆ decent ಲುಕ್ ಬರುತ್ತದೆ.
ವೇವಿ hairstyle : ಇದು ನೋಡುವುದಕ್ಕೆ ಸ್ವಲ್ಪ ಕರ್ಲಿ ಹೇರ್ಸ್ ರೀತಿ ಇರುತ್ತೆ ಆದರೆ ನ್ಯಾಚುರಲ್ ಲುಕ್ ಇರುತ್ತೆ. ಇದು maintenance, ಕಡಿಮೆ ಇರುವುದರಿಂದ ಪ್ರತಿಯೊಬ್ಬರೂ ಟ್ರೈ ಮಾಡಬಹುದು.
ಲಾಂಗ್ ಹೇರ್ : ಇದು ಸುಲಭವಾಗಿಯೂ ಇರುತ್ತೆ ಮತ್ತೆ ನ್ಯಾಚುರಲ್ ಫೀಲ್ ಸಿಗುತ್ತೆ.
ಪಾರಂಪರಿಕ ಜಡೆ : ಇದು ನಮ್ಮ ಭಾರತದ ಮಹಿಳೆಯರಲ್ಲಿ ಹಿಂದಿನ ಕಾಲದಿಂದ ಬರುತ್ತಿರುವ ಪರಂಪರೆ. ಉದ್ದ ಕೂದಲು ಬಿಡುವುದಕ್ಕಿಂತ, ಜಡೆ ಹಾಕಿರುವ ಹೆಣ್ಣು ಮಕ್ಕಳು ನೋಡಲು ಅಂದವಾಗಿ ಕಾಣುತ್ತಾರೆ.
ಇವೆಲ್ಲವೂ ನೈಸರ್ಗಿಕವಾಗಿ ಯಾವುದೇ ಸ್ಟ್ರೇಟ್ನರ್ ಬಳಸದೆ ಇರುವ hairstyle ಆಗಿವೆ.
ಇವೆಲ್ಲ ಟೆಕ್ನಿಕಲ್ ವರ್ಡ್ಸ್ ನೀವು ಕೇಳಿರೋದಿಲ್ಲ ಪರವಾಗಿಲ್ಲ ಒಂದು ಸರಿ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಅದರ ಬಗ್ಗೆ ಗೊತ್ತಾಗತ್ತೆ.
ಕೂದಲು ಯಾಕೆ ಉದುರುತ್ತವೆ? ಕಾರಣಗಳು
ಇಂದಿನ ಜೀವನಶೈಲಿಯಲ್ಲಿ ಹಲವಾರು ಕಾರಣಗಳಿಂದ ನಮ್ಮ ಕೂದಲು ಉದರುತ್ತವೆ. ಅದರಲ್ಲಿ ಪ್ರಮುಖ ಕಾರಣಗಳನ್ನ ನೋಡೋಣ.
- ಹಾರ್ಮೋನ್ ಬದಲಾವಣೆ ಆಗುವುದು : ನಮ್ಮ ದೇಹದಲ್ಲಿ ಅದರಲ್ಲೂ ಮಹಿಳೆಯರಲ್ಲಿ ಹಾರ್ಮೋನ್ ಗಳ ಅಸಮತೋಲನದಿಂದ ಕೂದಲು ಉದುರಲು ಶುರುವಾಗುತ್ತವೆ. ಗರ್ಭಿಣಿಯಲ್ಲಿ, ಮೆನೋಪಾಸ್ ಸಮಯದಲ್ಲಿ, ಥೈರಾಯ್ಡ್, PCOS ಈ ಎಲ್ಲಾ ಕಾರಣಗಳಿಂದ ಹೆಚ್ಚು ಕೂದಲು ಉದುರುತ್ತವೆ.
- ಒತ್ತಡ : ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಸ್ಟ್ರೆಸ್ ಒತ್ತಡಕ್ಕೆ ಒಳಗಾಗುತ್ತಿರುತ್ತಾರೆ. ಇದು ನಮ್ಮ ಕೂದಲು ಉದುರಲು ನೇರ ಕಾರಣವಾಗುತ್ತದೆ.
- ದೇಹದಲ್ಲಿ ಪೋಷಕಾಂಶಗಳ ಕೊರತೆ : ನಾವು ತಿನ್ನುವ ಊಟದಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ, ಐರನ್, ಪ್ರೊಟೀನ್, ಜಿಂಕ್, ವಿಟಮಿನ್ D ಕೊರತೆಯಿಂದ ಕೂದಲಿಗೆ ಬೇಕಿರುವ ಕೆರಾಟಿನ್ ಪ್ರೊಟೀನ್ ಸಿಗುವುದಿಲ್ಲ. ಈ ಕಾರಣದಿಂದ ಕೂದಲು ಸರಿಯಾಗಿ ಬೆಳೆಯುವುದಿಲ್ಲ.
- ಚರ್ಮದ ಸೋಂಕು : ತಲೆಯಲ್ಲಿ ನಾನಾ ಕಾರಣಗಳಿಂದ ಒಟ್ಟು, ಸೋಂಕು, ಇನ್ಫೆಕ್ಷನ್ ಆದರೆ ಅದು ಬೇಗ ವಾಸಿಯಾಗುವುದಿಲ್ಲ ಆದ್ದರಿಂದ ತಲೆಯಲ್ಲಿನ ಕೂದಲಿನ ಮೇಲೆ ನೀರ ಪರಿಣಾಮ ಬೀರುತ್ತದೆ.
- ಕೆಮಿಕಲ್ಗಳ ಬಳಕೆ : ತಲೆಗೆ ಸಿಕ್ಕ ಸಿಕ್ಕ ಶಾಂಪೂ ಬಳಸುವುದು, ಈ ರೀತಿ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಬರುತ್ತದೆ.
- ಫ್ಲೋರೈಡ್ ನೀರು : ಮನೆಯಲ್ಲಿ ಪ್ಲೋರೈಡ್ ಜಾಸ್ತಿ ಇರುವ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಬೇಗ ಉದುರುತ್ತವೆ.
ಈ ಎಲ್ಲ ಕಾರಣಗಳನ್ನು ಸರಿಯಾದ ಸಮಯದಲ್ಲಿ ಗುರ್ತಿಸಿಕೊಂಡರೆ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಹಿಡಿಯಬಹುದು.
ಇದನ್ನೂ ಓದಿ : ತಲೆ ಕೂದಲು ಉದುರಲು ಕಾರಣಗಳು ಮತ್ತೆ ನೈಸರ್ಗಿಕ ಪರಿಹಾರಗಳು.
ಟ್ರಿಮ್ಮಿಂಗ್ ಮಾಡುವುದರಿಂದ ಕೂದಲಿನ ಮೇಲೆ ಮೇಲೆ ಯಾವ ಪರಿಣಾಮ ಆಗುತ್ತದೆ.
ಇದು ನಮ್ಮಲ್ಲಿ ಅನೇಕ ಜನರಿಗೆ ಇರುವ ಸಾಮಾನ್ಯ ಪ್ರಶ್ನೆ.
ಟ್ರಿಮ್ಮಿಂಗ್ ಮಾಡುವುದರಿಂದ ಕೂದಲಿನ ಬೇರುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಿಗೆ ಕೂದಲಿನ ಕೊನೆಯ ತುದಿಯಲ್ಲಿ ಸ್ಪ್ಲಿಟ್ ಹೇರ್ ಕಂಟ್ರೋಲ್ ಮಾಡಬಹುದು. ಅಂದರೆ ತುದಿಯಲ್ಲಿ ಕೂದಲು ಎರಡು ಭಾಗವಾಗಿ ಒಡೆದುಕೊಂಡಿರುತ್ತವೆ. ಇದನ್ನು ತಡೆಯಬಹುದು.
ಮತ್ತೆ ಈ ರೀತಿ ಟ್ರಿಮ್ ಮಾಡುವುದರಿಂದ ಕೊದಲು ಒಡೆಯುವುದು ತಪ್ಪುತ್ತದೆ.
ಆದ್ದರಿಂದ ಪ್ರತೀ ತಿಂಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಬೇಕು.
ಮಹಿಳೆಯರು ಮತ್ತೆ ಪುರುಷರಿಗೆ ಕೆಲವೊಂದು ಸ್ಟೈಲಿಶ್ ಹೇರ್ ಕಟಿಂಗ್
ಪುರುಷರಿಗಾಗಿ Hairstyle For Men :
- Fade Cut – ಇದು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಯಾಗಿದೆ. ಮತ್ತೆ ನೋಡುವುದಕ್ಕೆ ಕ್ಲೀನ್ ಲುಕ್ ಕೊಡುತ್ತದೆ.
- Undercut Hair : ಇದು ನೋಡುವುದಕ್ಕೆ ಸ್ವಲ್ಪ ಯಂಗ್ ಆಗಿ ಕಾಣುವುದಲ್ಲದೇ, ಸ್ವಲ್ಪ ಸ್ಟೈಲಿಶ್ ಆಗಿ ಇರುತ್ತದೆ.
- Beachy Waves : ಇದು ಸ್ವಲ್ಪ medium length hair ಇದ್ದು ಕೂದಲು ರಿಲ್ಯಾಕ್ಸ್ ಆಗಿ ಕಾಣುತ್ತವೆ. ಕೂದಲು ಗಾಳಿಗೆ ತುಂಬಾ ಮೂವಮೆಂಟ್ ಆಗಿ ಒಳ್ಳೆಯ outdoors ಫೀಲ್ ಕೊಡುತ್ತದೆ.
- Fade Wavy Hair : ಇದರಲ್ಲಿ ಸೈಡ್ಸ್ ಮತ್ತೆ ಬ್ಯಾಕ್ ಫುಲ್ ಶಾರ್ಟ್ ಮಾಡಿ ಮುಂದೆ ಸ್ವಲ್ಪ ಬಿಡುತ್ತಾರೆ. ನೋಡಲು ಕ್ಲೀನ್, ಮತ್ತೆ ಸಿಂಪಲ್ ಸ್ಟೈಲಿಶ್ ಆಗಿ ಕಾಣುತ್ತಾರೆ.
ಮಹಿಳೆಯರಿಗಾಗಿ Hairstyle For Women :
- Layer Cut Style : ಇದು ಮಹಿಳೆಯರಿಗೆ ನ್ಯಾಚುರಲ್ ಲುಕ್ ಕೊಡುತ್ತದೆ ಜೊತೆಗೆ ಹೇರ್ flat ಆಗಿ thin ಆಗಿರುತ್ತೆ.
- Bob Cut Style : ಕೆಲವು ಮಹಿಳೆಯರು ಮೂವಿ ನಲ್ಲಿ ಈ ರೀತಿ hairstyle ನೋಡಿ ಇದೆ ರೀತಿ ಕಟ್ ಮಾಡಿಸುತ್ತಾರೆ. ಇದರಿಂದ ಕೂದಲು ಶಾರ್ಟ್ ಆಗಿ maintain ಸುಲಭ ಆಗುತ್ತದೆ.
- Feather Cut Style : ಇದು ಹುಡುಗಿಯರಿಗೆ ಹೇಳಿ ಮಾಡಿಸಿದ hairstyle ಕೂದಲು ಗರಿಗರಿಯಾಗಿ ನವಿಲಿನ ರೆಕ್ಕೆಯಂತೆ ಕಾಣುತ್ತಿರುತ್ತವೆ, ಸ್ಟೈಲ್ ಮತ್ತೆ ಲುಕ್ ಸೂಪರ್ ಆಗಿರುತ್ತೆ.
- Step Cut Style : ಇದು ನೈಸರ್ಗಿಕವಾಗಿ ಕಂಡರೂ ಬ್ಯೂಟಿಫುಲ್ ಆಗಿ ಕಾಣುತ್ತದೆ.
ನಮ್ಮ ಕೂದಲು ಸರಿಯಾದ ರೀತಿ ಬೆಳವಣಿಗೆ Hair growth ಆಗಲು 8 ನೈಸರ್ಗಿಕ ಎಣ್ಣೆಯ ಮಸಾಜ್ Oil Massage
ನಮ್ಮ ಕೂದಲು ಸರಿಯಾದ ರೀತಿ ಬೆಳವಣಿಗೆ ಆಗಲು ಅದಕ್ಕೆ ವಾರಕ್ಕೆ ಒಮ್ಮೆಯಾದರೂ ಕೆಲವೊಂದು ನೈಸರ್ಗಿಕವಾಗಿ ಸಿಗುವ ಎಣ್ಣೆಯನ್ನು ಹಚ್ಚಬೇಕು. ಅದರಲ್ಲಿ ಕೆಲವು ಮುಖ್ಯ ಎಣ್ಣೆಗಳೆಂದರೆ :
- ನೈಸರ್ಗಿಕವಾಗಿ ಸಿಗುವ ತೆಂಗಿನ ಎಣ್ಣೆ : ಇದು ಕೂದಲನ್ನು ತಂಪಾಗಿಸುತ್ತದೆ, ಮತ್ತೆ ಮತ್ತೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
- ಬಾದಾಮಿ ಎಣ್ಣೆ : ಬಾದಾಮಿ ಬೀಜದಿಂದ ಎಣ್ಣೆ ತೆಗೆದು ಕೂದಲಿಗೆ ಹಚ್ಚುವುದರಿಂದ ಕೂದಲು ಚನ್ನಾಗಿ ಬೆಳೆಯುತ್ತವೆ.
- ಅರಳೆ ಎಣ್ಣೆ (Castor oil) : ಇದು ತಲೆಯನ್ನು ತಂಪಾಗಿಸುತ್ತದೆ. ಮತ್ತೆ ದೇಹಕ್ಕೆ ಉಷ್ಣ ಆಗಿದ್ದರೆ ಸರಿಪಡಿಸುತ್ತದೆ.
- ಆಮ್ಲ ಎಣ್ಣೆ : ಇದು ಕೂದಲಿನ ಬೆಳವಣಿಗೆಗೆ ಮತ್ತೆ ತಲೆಯ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು.
- ಆಲೋವೆರಾ : ಇದು ಕೂದಲು ಒಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ.
- ಕರಿಬೇವು ಸೊಪ್ಪಿನ ಎಣ್ಣೆ : ಕೂದಲು ಕಪ್ಪಾಗುವುದಕ್ಕೆ ಸಹಾಯ ಮಾಡುತ್ತದೆ.
- ಮೆಂತ್ಯೆ ಎಣ್ಣೆ : ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಮತ್ತು ತಲೆಯ ಡ್ಯಾಂಡ್ರಫ್ ಕಡಿಮೆಯಾಗುತ್ತದೆ.
- ಬೃಂಗರಾಜ : ಇದು ಉತ್ತಮ ಗುಣಮಟ್ಟದ ಹರ್ಬಲ್ ಎಣ್ಣೆ. ಇದು ಕೂದಲು ಬೆಳವಣಿಗೆಯಲ್ಲಿ ತುಂಬಾ ಸಹಕಾರಿ. ಮತ್ತೆ ತಲೆ ಬುರುಡೆಯಲ್ಲಿ ಉರಿ, ನವೆ Itching ಇದ್ದರೆ ಸಲೀಸಾಗಿ ಕ್ಲೀನ್ ಮಾಡುತ್ತದೆ. ಇದನ್ನು King of Hair ಅನ್ನುತ್ತಾರೆ.
ಈ ರೀತಿಯ ಎಣ್ಣೆಗಳನ್ನು ವಾರಕ್ಕೆ ಒಮ್ಮೆಯಾದರೂ ಹಚ್ಚಿ 15-20 ನಿಮಿಷ ಮಸಾಜ್ ಮಾಡುವುದರಿಂದ, ರಕ್ತ ಸಂಚಲನ ಸರಿಯಾಗಿ ಆಗುತ್ತದೆ. ಮತ್ತೆ ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ, ಕೂದಲು ಉದುರುವುದು ಕಡಿಮೆಯಾಗುತ್ತದೆ, ಮತ್ತೆ ಕೂದಲಿನ ತುದಿಬಾಗ ಒಡೆಯುವುದು ಕಡಿಮೆಯಾಗುತ್ತದೆ, ಮತ್ತೆ ತಲೆಯಲ್ಲಿ ಇನ್ಫೆಕ್ಷನ್, ಬ್ಯಾಕ್ಟಿರಿಯಾ, ಪಂಗಸ್ ಬರುವುದು ಕಡಿಮೆಯಾಗುತ್ತದೆ.
Hairstyle ಮತ್ತೆ Haircutting, ಇವು ಕೇವಲ ಕೂದಲಿನ ಅಂದಕ್ಕಾಗಿ ಮತ್ತು ಪ್ಯಾಷನ್ಗಾಗಿ ಅಲ್ಲ. ಬದಲಿಗೆ ಕೂದಲಿನ ಒಟ್ಟಾರೆ ಬೆಳವಣಿಗೆಗೆ ಮತ್ತೆ ಆರೋಗ್ಯಕ್ಕಾಗಿ ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ತವ್ಯ. ಕೂದಲನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ಮುಖದ ಸೌಂದರ್ಯವೂ ಹೆಚ್ಚುತ್ತದೆ, ಜೊತೆಗೆ ಸಮಾಜದಲ್ಲಿ ನಮ್ಮ ಒಟ್ಟಾರೆ ಕಾನ್ಫಿಡೆನ್ಸ್ ಲೆವೆಲ್ ಜಾಸ್ತಿಯಾಗುತ್ತದೆ.
ಕೂದಲಿನ ಆರೈಕೆಗೆ ದಿನನಿತ್ಯ ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ನಿಮಗೆ ಬೇಕಾದ ವಸ್ತುಗಳು ಕೂದಲಿನ ಆರೈಕೆಗೆ ಸಿಗುತ್ತವೆ. ಆದರೆ ಅವೆಲ್ಲ ತಾತ್ಕಾಲಿಕ. ಕೂದಲು ಉದುರುವ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ, ನಾನು ಮೇಲೆ ತಿಳಿಸಿರುವ ನೈಸರ್ಗಿಕ ಎಣ್ಣೆಗಳನ್ನು ವಾರಕ್ಕೆ ಒಮ್ಮೆಯಾದರೂ ಹಚ್ಚಿದರೆ ಕೂದಲಿನ ಆರೋಗ್ಯ ಚನ್ನಾಗಿರುತ್ತದೆ.
ಕೊನೆಯದಾಗಿ “Don’t underestimate the power of a good haircut and natural hair growth”.
